×
Ad

ಬಿಜೈ: ಟಯರ್ ಮಾರಾಟ ಮಳಿಗೆ ‘ಟಯರ್ ಗ್ರಿಪ್’ ಶುಭಾರಂಭ

Update: 2018-01-28 22:12 IST

ಮಂಗಳೂರು, ಜ. 28: ನಗರದ ಬಿಜೈ ಚರ್ಚ್ ರಸ್ತೆಯ ಕೊಡಿಯಾಲ್‌ಗುತ್ತು ಕ್ರಾಸ್‌ನಲ್ಲಿರುವ ವಿವಿಧ ಬ್ರಾಂಡ್‌ಗಳ ಟಯರ್ ಮಾರಾಟ ಮಳಿಗೆ ‘ಟಯರ್ ಗ್ರಿಪ್’ ರವಿವಾರ ಉದ್ಘಾಟನೆಗೊಂಡಿತು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಅವರು ನೂತನ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭ ಸಿಟಾಡೆಲ್ ಬಿಲ್ಡರ್ಸ್‌ನ ಅಜಿತ್ ಕುಮಾರ್, ವೀನು ಸಂಸ್ಥೆಯ ವಿನೋದ್ ಶೇರ್ಲೆಕರ್, ಶಾಲಿಮಾರ್ ಬಿಲ್ಡರ್ಸ್‌ನ ಬಶೀರ್ ಅಹ್ಮದ್, ಮಳಿಗೆಯ ಮಾಲಕ ಮುಹಮ್ಮದ್ ಫರ್ಶತ್ ಅನ್ಸಾರ್, ಅವರ ತಂದೆ ಅಹ್ಮದ್ ಅನ್ಸಾರ್, ಅಹ್ಮದ್ ದೇರಳಕಟ್ಟೆ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News