ಜಪಾನ್: ಡಿಜಿಟಲ್ ಕರೆನ್ಸಿಗೆ ಹ್ಯಾಕರ್‌ಗಳ ಕನ್ನ

Update: 2018-01-28 17:07 GMT

ಟೊಕಿಯೊ,ಜ.28: ಹ್ಯಾಕರ್‌ಗಳು ಕೋಟ್ಯಂತರ ಡಾಲರ್ ಮೌಲ್ಯದ ಡಿಜಿಟಲ್ ಕರೆನ್ಸಿಯನ್ನು ಲಪಟಾಯಿಸಿದ ಘಟನೆಯ ಬಳಿಕ, ಜಪಾನ್ ಮೂಲದ ಡಿಜಿಟಲ್ ಕರೆನ್ಸಿ ವಿನಿಮಯ ಸಂಸ್ಥೆ ಕಾಯಿನ್‌ಚೆಕ್ ರವಿವಾರ ಹೇಳಿಕೆ ನೀಡಿ, ಸಂತ್ರಸ್ತ ಗ್ರಾಹಕರಿಗೆ ಒಟ್ಟು ಸುಮಾರು 400 ದಶಲಕ್ಷ ಡಾಲರ್‌ಗಳನ್ನು ಮರುಪಾವತಿ ಮಾಡುವುದಾಗಿ ಘೋಷಿಸಿದೆ.

 ತನ್ನ ಡಿಜಿಟಲ್ ಕರೆನ್ಸಿ ವಿನಿಮಯ ವ್ಯವಸ್ಥೆಯೊಳಗೆ ಹ್ಯಾಕರ್‌ಗಳು ಅನಧಿಕೃತವಾಗಿ ಸಂಪರ್ಕ ಸಾಧಿಸಿ ಕೋಟ್ಯಂತರ ಡಾಲರ್ ವೌಲ್ಯದ ಹಣವನ್ನು ಲಪಟಾಯಿಸಿರುವುದನ್ನು ಕಾಯಿನ್‌ಚೆಕ್ ಶುಕ್ರವಾರ ಪತ್ತೆ ಹಚ್ಚಿತ್ತು. ಆನಂತರ ಅದು ಬಿಟ್‌ಕಾಯಿನ್ ಹೊರತುಪಡಿಸಿ ಇತರ ಎಲ್ಲಾ ಡಿಜಿಟಲ್ ಕರೆನ್ಸಿಗಳ ವಹಿವಾಟವನ್ನು ಅಮಾನತಿನಲ್ಲಿರಿಸಿತ್ತು.

 ಹ್ಯಾಕರ್‌ಗಳು ಚೌರ್ಯದಿಂದಾಗಿ ತನಗೆ 58 ದಶಲಕ್ಷ ಯೆನ್ (ಜಪಾನಿ ಕರೆನ್ಸಿ)ವೌಲ್ಯದ ಹಣ ನಷ್ಟವಾಗಿರುವುದಾಗಿ ಕಾಯಿನ್‌ಚೆಕ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News