ಇಸ್ಪೀಟ್ ಜುಗಾರಿ: ಎಂಟು ಮಂದಿ ಸೆರೆ
Update: 2018-01-28 22:42 IST
ಉಡುಪಿ, ಜ.28: ಅಂಬಾಗಿಲು ಸ್ಟೇಟ್ ಬ್ಯಾಂಕ್‌ನ ಹಿಂಭಾಗ ಜ.28 ರಂದು ಬೆಳಗ್ಗೆ ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಡುತ್ತಿದ್ದ ಕಕ್ಕುಂಜೆಯ ಶೇಖರ ಪೂಜಾರಿ (39), ನಯಂಪಳ್ಳಿಯ ರಮೇಶ್ ಪೂಜಾರಿ (36), ಅಂಬಾ ಗಿಲಿನ ಕುಮಾರ್ ಕುಚೇಲಿ(27) ಎಂಬವರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದು, ಸುಧೀರ್ ಹನುಮಂತ ನಗರ, ವಿಜಯ ಕಲ್ಮಾಡಿ, ಜಮೀರ್ ಮಲ್ಪೆ ಪರಾರಿಯಾಗಿದ್ದಾರೆ. ಇವರಿಂದ 7,650 ರೂ. ನಗದು ವಶ ಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ: ನಾಡ ಹೈಯರ್ ಪ್ರೈಮರಿ ಶಾಲೆಯ ಬಳಿ ಹಾಡಿಯಲ್ಲಿ ಜ. 28 ರಂದು ಬೆಳಗ್ಗೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಪಡುಕೋಣೆಯ ಚಂದ್ರ(40), ಭಾಸ್ಕರ(35), ಶೇಖರ ದೇವಾಡಿಗ(46), ಅಶೋಕ(37), ಸುರೇಶ ಮೊಗವೀರ (48) ಎಂಬವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿ, 2,020ರೂ. ನಗದು ವಶಪಡಿಸಿಕೊಂಡಿದ್ದಾರೆ.