×
Ad

ತುಳು ರಂಗ ಭೂಮಿಯ ಹಿರಿಯ ಕಲಾವಿದ ಕೆ.ಆನಂದ ಶೆಟ್ಟಿ ನಿಧನ

Update: 2018-01-28 22:51 IST

ಮಂಗಳೂರು, ಜ.28: ತುಳು ರಂಗಭೂಮಿಯ ಹಿರಿಯ ಕಲಾವಿದ ಊರ್ವ ಚಿಲಿಂಬಿ ಅಶೋಕ ನಗರದ ನಿವಾಸಿ ಕೆ.ಆನಂದ ಶೆಟ್ಟಿ (74) ತಮ್ಮ ನಿವಾಸದಲ್ಲಿ ನಿಧನರಾದರು.

ಕಳೆದ 23 ವರ್ಷಗಳಿಂದ ತುಳು ನಾಟಕಗಳಲ್ಲಿ 6 ಸಾವಿರಕ್ಕೂ ಅಧಿಕ ಪ್ರದರ್ಶನವನ್ನು ನೀಡಿರುವ ಆನಂದ ಶೆಟ್ಟಿ ಸಂಜೀವ ದಂಡ ಕೇರಿಯವರ ಬಯ್ಯಮಲ್ಲಿಗೆ, ಎ. ಗಂಗಾಧರ ಶೆಟ್ರ ಪೂಮಾಲೆ, ದೇವದಾಸ್ ಕಾಪಿಕಾಡ್‌ರವರ ಬಲೇ ಚಾಪರ್ಕ ತಂಡದ ಮೂಲಕ ಬಲೇ ಚಾಪರ್ಕ, ಗಂಟೆ ಏತಾಂಡ್, ಈರ್ ದೂರ, ಪಂಡ ನಂಬಯರ್, ಪುದರ್ ದೀತಿಜಿ , ಸತ್ಯ ಓಲುಂಡು ಮೊದಲಾದ ನಾಟಕಗಳಲ್ಲಿ, ಮಾರಿಬಲೆ ಸಿನಿಮಾದಲ್ಲಿ ನಟಿಸಿದ ಕಲಾವಿದ 2016ರ ತುಳು ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪಡೆದಿದ್ದಾರೆ.

ಮೃತರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News