ಭಟ್ಕಳ: ಮನೆಗೆ ನುಗ್ಗಿ ನಗದು ಕಳವು
Update: 2018-01-28 23:28 IST
ಭಟ್ಕಳ, ಜ. 28: ಇಲ್ಲಿನ ಮದೀನಾ ಕಾಲನಿಯ ಮನೆಯೊಂದರ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಅಲ್ಲಿದ್ದ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ಪರಾರಿಯಾಗಿದ್ದಾರೆ.
ಶುಕ್ರವಾರ ಮದೀನಾ ಕಾಲನಿಯ ಮಹ್ಮದ್ ಸಾದುಲ್ಲಾ ಎಂಬವರು ತಮ್ಮ ಹೆಂಡತಿಗೆ ಶಸ್ತ್ರಚಿಕಿತ್ಸೆಯ ನಿಮಿತ್ತ ಮಂಗಳೂರಿಗೆ ತೆರಳಿದ್ದು, ಮನೆಯಲ್ಲಿ ಯಾರು ಇಲ್ಲದ ಸಂದರ್ಭ ದುಷ್ಕರ್ಮಿಗಳು ಮನೆಗೆ ನುಗ್ಗಿ ನಗದು ಕಳವು ಮಾಡಿರುವುದಾಗಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.