ಭಟ್ಕಳ: ಮಹಿಳೆಯ ಸರ ಕಳವು
Update: 2018-01-28 23:35 IST
ಭಟ್ಕಳ, ಜ. 28: ಸೋಡಿಗದ್ದೆ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪರಿಚಿತನೋರ್ವ ಕಿತ್ತು ಪರಾರಿಯಾದ ಘಟನೆ ರವಿವಾರ ನಡೆದಿದೆ.
ಸರ್ಪನಕಟ್ಟೆಯ ಮಾದೇವಿ ನಾರಾಯಣ ನಾಯ್ಕ (50) ಸರ ಕಳೆದುಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ದೇವಸ್ಥಾನದಲ್ಲಿನ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯ ಹಿಂಬದಿಯಿಂದ ಬಂದ ಅಪರಿಚಿತ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.