ಶ್ರೀದೇವಿ ಕಾಲೇಜಿಗೆ ಮೂರು ರ್ಯಾಂಕ್
Update: 2018-01-29 17:38 IST
ಮಂಗಳೂರು, ಜ.29: ಮಂಗಳೂರು ವಿವಿಯು ಕಳೆದ ವರ್ಷ ನಡೆಸಿದ ಅಂತಿಮ ವರ್ಷದ ವಿವಿಧ ಪದವಿ ಪರೀಕ್ಷೆಗಳಲ್ಲಿ ಪ್ರಥಮ ಮತ್ತು ತೃತೀಯ ರ್ಯಾಂಕ್‌ಗಳು ಶ್ರೀದೇವಿ ಕಾಲೇಜ್ ಸಮೂಹಕ್ಕೆ ದೊರೆತಿದೆ.
ಕಾಲೇಜಿನ ಬಿಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್‌ನಲ್ಲಿ ಮುನಿಷಾ ಮರಿಯಮ್ಮ ಶಾಕಿರಾ ಹಾಗೂ ಬಿಎಸ್ಸಿ ಫ್ಯಾಶನ್ ಡಿಸೈನ್‌ನಲ್ಲಿ ಸಾಕ್ಷಾ ಪಿ. ಶೆಟ್ಟಿ ಪ್ರಥಮ ರ್ಯಾಂಕ್ ಮತ್ತು ಕಾಲೇಜ್ ಆಫ್ ಹೋಟೇಲ್ ಮ್ಯಾನೇಜ್‌ಮೆಂಟ್‌ನ ಬಿಎಸ್ಸಿ ಹಾಸ್ಪಿಟ್ಯಾಲಿಟಿ ಸೈಯನ್ಸ್‌ನಲ್ಲಿ ಕಿರಣ್ ಪೂಜಾರಿ ತೃತೀಯ ರ್ಯಾಂಕ್‌ಗಳನ್ನು ಗಳಿಸಿರುತ್ತಾರೆ.