×
Ad

ಕೆಥೋಲಿಕ್ ಸಮಾಜೋತ್ಸವ ಕಾರ್ಯಕ್ರಮದ ಹೊರೆಕಾಣಿಕೆ ಮೆರವಣಿಗೆಯ ಉತ್ಸವಕ್ಕೆ ಚಾಲನೆ

Update: 2018-01-29 17:48 IST

ಬಂಟ್ವಾಳ, ಜ. 29: ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ಬಂಟ್ವಾಳ ವಲಯ ಸಮಿತಿಯಿಂದ ಮೂಡಬಿದಿರೆ ಅಲಂಗಾರು ಚರ್ಚ್ ವಠಾರದಲ್ಲಿ ಜರಗುವ ಕೆಥೋಲಿಕ್ ಸಮಾಜೋತ್ಸವ ಕಾರ್ಯಕ್ರಮದ ಹೊರೆಕಾಣಿಕೆ ಮೆರವಣಿಗೆಯ ಉತ್ಸವಕ್ಕೆ ಮೊಡಂಕಾಪು ಚರ್ಚ್ ಧರ್ಮಗುರು ಅಶ್ವಿನ್ ಕಾರ್ಡೋಜಾ ಅವರು ರವಿವಾರ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಕೆಥೋಲಿಕ್ ಸಭಾ ಬಂಟ್ವಾಳ ವಲಯ ಅಧ್ಯಕ್ಷ ಸ್ಟೇನ್ಲಿ ಲೋಬೋ, ಪ್ರಧಾನ ಕಾರ್ಯದರ್ಶಿ ಫ್ರಾನ್ಸಿಸ್ ಡೇಸಾ, ಕೆ.ಸ.ಬಂ.ವಲಯದ ಸ್ಥಾಪಕಾಧ್ಯಕ್ಷ ವಾಲ್ಟರ್ ನೋರೋನಾ, ಅಗ್ರಾರ್ ಕೆ.ಸ.ಕೇಂದ್ರೀಯ ನಿಯೋಜಿತ ಅಧ್ಯಕ್ಷ ಅಲ್ವಿನ್ ಮೋನಿಸ್, ಪದಾಧಿಕಾರಿಗಳಾದ ರಿಚಾರ್ಡ್ ಮೆನೇಜಸ್ ಹಾಗೂ 11 ಘಟಕಗಳ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

11 ಘಟಕಗಳ 7 ವಾಹನಗಳಲ್ಲಿ ಹೊರೆಕಾಣಿಕೆಯನ್ನು ಮೂಡಬಿದಿರೆಯ ಸ್ವರಾಜ್ ಮೈದಾನಕ್ಕೆ ಸಾಗಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News