ಒಳಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ಉದ್ಘಾಟನೆ
Update: 2018-01-29 17:51 IST
ಬಂಟ್ವಾಳ,ಜ.29: ತಾಲೂಕಿನ ಬಿ.ಮೂಡ ಗ್ರಾಮದ ಪಲ್ಲಮಜಲು ಒಳರಸ್ತೆಗೆ ಸುಮಾರು 8.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಒಳಚರಂಡಿ ಹಾಗೂ ಕಾಂಕ್ರೀಟ್ ರಸ್ತೆಯನ್ನು ಪುರಸಭಾ ಸದಸ್ಯೆ ಮುಮ್ತಾಝ್ ಬಿ.ಸಿ.ಲತೀಫ್ ಅವರು ರವಿವಾರ ಉದ್ಘಾಟಿಸಿದರು.
ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷ ಬೇಧ ಮರೆತು ವಾರ್ಡ್‍ನ ಅಭಿವೃದ್ಧಿಗಾಗಿ ಶ್ರಮಿಸುವ ಮೂಲಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಎಸ್‍ಡಿಪಿಐ ತಲಪಾಡಿ ಘಟಕದ ಅಧ್ಯಕ್ಷ ಆರೀಫ್ ತಲಪಾಡಿ, ಸಾಮಾಜಿಕ ಕಾರ್ಯಕರ್ತರಾದ ಬಿ.ಸಿ.ಲತೀಫ್, ಸತ್ತಾರ್ ಕಲ್ಲಗುಡ್ಡೆ, ಹಿದಾಯತ್, ಇಸಾಕ್ ಪಲ್ಲಮಜಲು, ಸುಬೈರ್ ಪಲ್ಲಮಜಲು, ಮುಸ್ತಫಾ ಪಲ್ಲಮಜಲು, ಶಬೀರ್, ಲತೀಫ್ ಕೆ.ಎಚ್. ಮತ್ತಿತರರು ಉಪಸ್ಥಿತರಿದ್ದರು.
ಮುಸ್ತಾಕ್ ತಲಪಾಡಿ ಸ್ವಾಗತಿಸಿ, ಫಹಾದ್ ಕಾರ್ಯಕ್ರಮ ನಿರೂಪಿಸಿದರು.