×
Ad

ಜೆ.ವಿ. ಪ್ರೌಢಶಾಲೆ ಶಿರಾಲಿಯಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ

Update: 2018-01-29 18:43 IST

ಭಟ್ಕಳ,ಜ.29: ತಾಲೂಕಿನ ಶಿರಾಲಿಯ ಜನತಾ ವಿದ್ಯಾಲಯ ಪ್ರೌಢ ಶಾಲೆಯ 1967ರಲ್ಲಿ ಎಸೆಸೆಲ್ಸಿ ಉತ್ತೀರ್ಣರಾದ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಿತು. 

50 ವರ್ಷ ಹಿಂದಿನ ವಿದ್ಯಾರ್ಥಿಗಳ ತಂಡ ಒಂದೇ ಕಡೆ ಸೇರಿ ಚರ್ಚಿಸಿದ್ದು ವಿವಿಧ ಸ್ಪರ್ಧೆಗಳನ್ನು ಎರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಶಿಕ್ಷಕರಾದ ಯು.ಕೆ. ಉಡುಪ, ಸಿ.ಎಂ. ಪಟಗಾರ್, ವಿ.ಸಿ. ನಾಯಕ, ಆನಂದ ಕಡ್ಲೆ ಹಾಗೂ ಡಿ.ಜೆ. ಕಾಮತ್ ಅವರನ್ನು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಗೌರವಿಸಲಾಯಿತು. 

ನಿಧನರಾದ ಶಾಲೆಯ ಮುಖ್ಯಾಧ್ಯಾಪಕ ರಾಮನ್ ಮಾಸ್ತರ್ ಹಾಗೂ ಐವರು ವಿದ್ಯಾರ್ಥಿಗಳಿಗೆ ಶೃದ್ಧಾಂಜಲಿ ಸಲ್ಲಿಸುವ ಮೂಲಕ ಅವರನ್ನು ಸ್ಮರಿಸಲಾಯಿತು.  ಡಾ. ಪ್ರಭಾಕರ ಸರಾಫ್ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. 

ದಿನಕರ ಆಚಾರಿ, ಡಾ. ರಮೇಶ ಸರಾಫ್, ಎಂ. ಡಿ. ಫಕ್ಕಿ ಮುಂತಾದವರು ಉಪಸ್ಥಿತರಿದ್ದರು.  ವಕೀಲ ನಾರಾಯಣ ಯಾಜಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News