ಫೆ.1: ಮಡಿವಾಳ ಮಾಚಿದೇವ ಜಯಂತಿ ಮತ್ತು ಅಂಬಿಗರ ಚೌಡಯ್ಯ ಜಯಂತಿ
Update: 2018-01-29 20:40 IST
ಮಂಗಳೂರು, ಜ.29: ದ.ಕ.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಫೆ.1ರಂದು ಬೆಳಗ್ಗೆ 10ಕ್ಕೆ ಜಿಪಂ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಜಯಂತಿ ಮತ್ತು ಅಂಬಿಗರ ಚೌಡಯ್ಯ ಜಯಂತಿ ನಡೆಯಲಿದೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾಹಿತಿ ಸದಾನಂದ ನಾರಾವಿ ಮೂಡುಬಿದಿರೆ ಮಡಿವಾಳ ಮಾಚಿದೇವರ ಜಯಂತಿ ಮತ್ತು ಮಂಗಳೂರು ವಿವಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಡಾ. ನಾಗಪ್ಪ ಗೌಡ ಆರ್. ಅಂಬಿಗರ ಚೌಡಯ್ಯ ಜಯಂತಿಯ ಸಂದೇಶ ನೀಡಲಿರುವರು ಎಂದು ಪ್ರಕಟನೆ ತಿಳಿಸಿದೆ.