ಸಂಸ್ಕೃತ ವಿದ್ವಾಂಸ ಹರಿಕೃಷ್ಣ ತಂತ್ರಿ ನಿಧನಕ್ಕೆ ಪೇಜಾವರಶ್ರೀ ಸಂತಾಪ
Update: 2018-01-29 21:35 IST
ಉಡುಪಿ,ಜ.29: ಹರಿಕೃಷ್ಣ ತಂತ್ರಿಗಳ ಅನಿರೀಕ್ಷಿತ ನಿಧನಕ್ಕೆ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಾದರು ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಮೊದಲ ಪರ್ಯಾಯದಿಂದಲೂ ಮಠದಲ್ಲಿ ವಿದ್ಯಾರ್ಥಿಯಾಗಿ ನಮ್ಮ ಆತ್ಮೀಯರಾಗಿ, ಶಾಸ್ತ್ರ ವಿದ್ವಾಂಸರಾಗಿ ಅತ್ಯಂತ ಪರಿಚಿತರಾಗಿದ್ದ ಹರಿಕೃಷ್ಣ ತಂತ್ರಿಗಳ ನಿಧನದಿಂದ ನಮಗೆ ಅತ್ಯಂತ ವಿಷಾದವಾಗಿದೆ. ಅವರ ಆತ್ಮಕ್ಕೆ ಶ್ರೀಕೃಷ್ಣ ಮುಖ್ಯಪ್ರಾಣರ ಅನುಗ್ರಹವನ್ನು ಪ್ರಾರ್ಥಿಸುತ್ತೇನೆ ಎಂದವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.