ರೈತರ ಆರೋಗ್ಯದ ಕುರಿತು ದೇಶ ಕಾಳಜಿ ವಹಿಸಬೇಕು : ಪ್ರಮೋದ್
ಉಡುಪಿ, ಜ.29: ಇಡೀ ದೇಶಕ್ಕೆ ಅನ್ನ ನೀಡುವ ರೈತರ ಆರೋಗ್ಯದ ಕುರಿತಂತೆ ಇದುವರೆಗೆ ಚರ್ಚೆಯೇ ನಡೆದಿಲ್ಲ. ಸದನದಲ್ಲಿ ಕೃಷಿ ಉತ್ಪನ್ನಗಳ ಬೆಲೆ, ಬರ, ನೀರಾವರಿ , ಮಾರುಕಟ್ಟೆ ಕುರಿತಂತೆ ಚರ್ಚೆ ನಡೆದಿದ್ದು ಬಿಟ್ಟರೆ ರೈತರ ಆರೋಗ್ಯದ ಬಗ್ಗೆ ಯಾವ ಜನಪ್ರತಿನಿಧಿ ಗಮನ ಹರಿಸಿಲ್ಲ. ಆರೋಗ್ಯವಂತ ರೈತರಿಂದ ಸದೃಢ ದೇಶ ನಿರ್ಮಾಣ ಸಾಧ್ಯ. ಹೀಗಾಗಿ ರೈತರ ಆರೋಗ್ಯದ ಕುರಿತು ದೇಶ ಕಾಳಜಿ ವಹಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕರ್ನಾಟಕ ಕೃಷಿ ಬೆಲೆ ಆಯೋಗ, ಮಣಿಪಾಲದ ಕೆಎಂಸಿ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಣಿಪಾಲ ಕೆಎಂಸಿ ಡಾ.ಟಿಎಂಎ ಪೈ ಸಭಾಂಗಣ ದಲ್ಲಿ ನಡೆದ ರಾಜ್ಯದ ರೈತರ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ 130 ಕೋಟಿ ಜನರಿಗೆ ಆಹಾರ ಒದಗಿಸುವ ಜವಾಬ್ದಾರಿ ದೇಶದ ರೈತರ ಮೇಲಿದೆ. ಆಹಾರಕ್ಕಾಗಿ ಕೃಷಿಕ ಎಷ್ಟು ಮುಖ್ಯವೋ ಅಷ್ಟೇ ಆತನ ಆರೋಗ್ಯ ಕೂಡ ಮುಖ್ಯ. ಆದರೆ ಆತ ಬಳಸುವ ಕೃಷಿಗೆ ಬಳಸುವ ಕೀಟ ಮತ್ತು ಕ್ರಿಮಿ ನಾಶಕ ಇಂದು ಆತನನ್ನು ಅನಾರೋಗ್ಯಕ್ಕೆ ಈಡು ಮಾಡಿರುವುದು ರಾಜ್ಯ ಕೃಷಿ ಬೆಲೆ ಆಯೋಗ, ಕೆಎಂಸಿ ಮಣಿಪಾಲದ ಸಹಯೋಗದೊಂದಿಗೆ ನಡೆಸಿರುವ ಸಮೀಕ್ಷೆಯಿಂದ ಗೊತ್ತಾಗಿದೆ ಎಂದರು.
ರಾಜ್ಯದ ಎಂಟು ಜಿಲ್ಲೆಗಳ ಎಂಟು ಗ್ರಾಮಗಳ ರೈತರಲ್ಲಿ ನಡೆಸಿದ ಈ ಸಮೀಕ್ಷೆಯ ವೇಳೆ ಶೇ.51ರಷ್ಟು ರೈತರು ಕೀಟನಾಶಕದಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದು ಇದರಿಂದ ಗೊತ್ತಾಗಿದೆ. ಹೀಗಾಗಿ ಈಗ ಮಣ್ಣಿನ ಆರೋಗ್ಯ ಪರೀಕ್ಷೆ ನಡೆಸುವಂತೆ ರೈತರ ಆರೋಗ್ಯ ಪರೀಕ್ಷೆ ನಡೆಸುವ ಅಗತ್ಯ ಕೂಡಾ ಇಡೀ ದೇಶಕ್ಕಿದೆ ಎಂದರು.
ರಾಜ್ಯದ ಎಂಟು ಜಿಲ್ಲೆಗಳ ಎಂಟು ಗ್ರಾಮಗಳ ರೈತರಲ್ಲಿ ನಡೆಸಿದ ಈ ಸಮೀಕ್ಷೆಯ ವೇಳೆ ಶೇ.51ರಷ್ಟು ರೈತರು ಕೀಟನಾಶಕದಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದು ಇದರಿಂದ ಗೊತ್ತಾಗಿದೆ. ಹೀಗಾಗಿ ಈಗ ಮಣ್ಣಿನ ಆರೋಗ್ಯ ಪರೀಕ್ಷೆ ನಡೆಸುವಂತೆ ರೈತರ ಆರೋಗ್ಯ ಪರೀಕ್ಷೆ ನಡೆಸುವ ಅಗತ್ಯ ಕೂಡಾ ಇಡೀ ದೇಶಕ್ಕಿದೆ ಎಂದರು. ಮುಂಜಾಗೃತ ಕ್ರಮವಿಲ್ಲದೆ ರೈತರು ಕೃಷಿಗೆ ಕೀಟನಾಶಕ ಸಿಂಪಡಿಸುವುದರಿಂದ ಕೀಟದೊಂದಿಗೆ ಅವರ ಆರೋಗ್ಯವೂ ನಾಶವಾಗುತ್ತಿದೆ. ಕೃಷಿಗೆ ರಾಸಾಯನಿಕಗಳ ಬಳಕೆಯನ್ನು ನಿಲ್ಲಿಸಿ ಸಾವಯವ ಕೃಷಿಯನ್ನು ಅವಲಂಬಿಸುವುದು ಉತ್ತಮ ಎಂದವರು ಸಲಹೆ ನೀಡಿದರು.
ಮುಂಜಾಗೃತ ಕ್ರಮವಿಲ್ಲದೆ ರೈತರು ಕೃಷಿಗೆ ಕೀಟನಾಶಕ ಸಿಂಪಡಿಸುವುದರಿಂದ ಕೀಟದೊಂದಿಗೆ ಅವರ ಆರೋಗ್ಯವೂ ನಾಶವಾಗುತ್ತಿದೆ. ಕೃಷಿಗೆ ರಾಸಾಯನಿಕಗಳ ಬಳಕೆಯನ್ನು ನಿಲ್ಲಿಸಿ ಸಾವಯವ ಕೃಷಿಯನ್ನು ಅವಲಂಬಿಸುವುದು ಉತ್ತಮ ಎಂದವರು ಸಲಹೆ ನೀಡಿದರು. ಕೆಎಂಸಿ ತಜ್ಞ ವೈದ್ಯ ತಂಡದ ಡಾ.ಶಂಕರ್ ಚಿಕ್ಕಣವರ್ ಸಮೀಕ್ಷೆಯ ಕುರಿತು ಮಾತನಾಡಿ, ರಾಜ್ಯದ ಕಲುಬುರ್ಗಿ, ರಾಯಚೂರು, ಬೆಳಗಾವಿ, ಹಾವೇರಿ, ಚಿತ್ರದುರ್ಗ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳ ಆಯ್ದ ಎಂಟು ಹಳ್ಳಿಗಳಲ್ಲಿ ಮಾಹೆಯ ವೈದ್ಯರ ತಂಡ ನಡೆಸಿದ ಸಮೀಕ್ಷೆಯಿಂದ ರೈತರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹಿಮೋಗ್ಲೋಬಿನ್ ಕೊರತೆ ವರದಿಯಾಗಿದೆ ಎಂದರು.
ವರದಿಯ ವಿವರವನ್ನು ಸಭೆಗೆ ನೀಡಿದ ಡಾ.ಶಂಕರ್, ಸಮೀಕ್ಷೆ ನಡೆಸಿದ 743 ರೈತರ ಪೈಕಿ 216 ರೈತರಲ್ಲಿ (ಶೇ.29)ರಕ್ತದೊತ್ತಡ, ಶೇ.35ರಷ್ಟು ರೈತರಲ್ಲಿ ಸಕ್ಕರೆ ಕಾಯಿಲೆ, ಶೇ.34 ಮಂದಿಯಲ್ಲಿ ಹಿಮೋಗ್ಲೊಬಿನ್ ಕೊರತೆ ಹಾಗೂ ಶೇ 51 ರೈತರಲ್ಲಿ ಕೀಟನಾಶಕ ಅಂಶ ದೇಹದ ಒಳಗೆ ಹೋಗಿರುವುದು ಕ್ಯಾನ್ಸರ್ ರೋಗ ಪತ್ತೆ ಹಚ್ಚಲಾಗಿದೆ ಎಂದರು.
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ ಕಮ್ಮರಡಿ ಪ್ರಾಸ್ತಾವಿಕ ವಾಗಿ ಮಾತನಾಡಿ, ರೈತರ ಬೆಳೆ, ಬೆಲೆ, ಬವಣೆಗೂ ಮೀರಿ ಅವರಿಗೆ ಗೌರವಯುತ ಬದುಕಿಗೆ ಆದಾಯ ತರುವ ರೀತಿ ವಸ್ತುಸ್ಥಿತಿ ಅಧ್ಯಯನ ಮತ್ತು ಆರೋಗ್ಯದ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದರು.
ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಶನ್‌ನ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದು, ಪ್ರೊ ವೈಸ್‌ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗ ಉಪಸ್ಥಿತರಿದ್ದರು.
ಕೆಎಂಸಿಯ ಡೀನ್ ಡಾ.ಪ್ರಜ್ಞಾ ರಾವ್ ಸ್ವಾಗತಿಸಿ, ಡಾ.ವಿನುತಾ ಭಟ್ ವಂದಿಸಿದರು. ಡಾ.ಶೋಭಾ ಾಮತ್ ಕಾರ್ಯಕ್ರಮ ನಿರೂಪಿಸಿದರು.