ಹೊಳೆಯಲ್ಲಿ ಮುಳುಗಿ ಮೃತ್ಯು
Update: 2018-01-29 22:11 IST
ಕಾಪು, ಜ.29: ಚಿಪ್ಪುಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಜ.28ರಂದು ಮಧ್ಯಾಹ್ನ ವೇಳೆ ಉದ್ಯಾವರ ಗ್ರಾಮದ ಅಂಕುದ್ರು ಎಂಬಲ್ಲಿ ನಡೆದಿದೆ.
ಮೃತರನ್ನು ಅಂಕುದ್ರು ನಿವಾಸಿ ಸಕೇಂದ್ರ(50) ಎಂದು ಗುರುತಿಸಲಾಗಿದೆ. ಇವರು ಅಂಕುದ್ರು ಪಾಪನಾಶಿನಿ ಹೊಳೆಯ ಮಧ್ಯದಲ್ಲಿರುವ ಆಳ ಪ್ರದೇಶದಲ್ಲಿ ಮರುವಾಯಿ ಚಿಪ್ಪು ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.