ಬಂಟ್ವಾಳ : ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಂಟ್ವಾಳ, ಜ. 29: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಇದರ ಬಂಟ್ವಾಳ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಗ್ರಾಮೀಣ ಆರೋಗ್ಯ ರಕ್ಷಣಾ ಕೇಂದ್ರ ಮತ್ತು ಅಭಿವೃದ್ಧಿ ಕೇಂದ್ರ, ಯೆನಪೋಯ ಆಸ್ಪತ್ರೆ ದೇರಳಕಟ್ಟೆ, ರೆಡ್‍ಕ್ರಾಸ್ ಸಂಸ್ಥೆ ಹಾಗೂ ಆಯುಷ್ ಆಯುರ್ವೇದಿಕ್ ಸಹಯೋಗದೊಂದಿಗೆ ನೇತ್ರದಾನ, ರಕ್ತದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಸದಸ್ಯತನ ನೋಂದಣಿ ಮತ್ತು ನವೀಕರಣ ಅಭಿಯಾನ ಬಂಟ್ವಾಳದ ಎಸ್.ವಿ.ಎಸ್ ದೇವಳದ ಶಾಲೆಯಲ್ಲಿ ರವಿವಾರ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಂತೆ ನಮ್ಮ ನಡವಳಿಕೆಯೂ ಇರಬೇಕು. ಪ್ರತಿಯೊಬ್ಬ ವ್ಯಕ್ತಿಗೂ ರಕ್ತ ಅವಶ್ಯಕತೆ ಇರುವಂತೆ ಜಾತಿ, ಧರ್ಮಗಳನ್ನು ಮೀರಿ ಎಲ್ಲರಿಗೂ ಬೇಕಾಗುವಂತಹ ವ್ಯಕ್ತಿತ್ವವನ್ನು ಮನುಷ್ಯ ರೂಢಿಸಿಕೊಳ್ಳಬೇಕು ಎಂದರು.
ಟೈಲರ್ಸ್ ಎಸೋಸಿಯೇಷನ್ ರಾಜ್ಯಮಟ್ಟದಲ್ಲಿ ಬಲಿಷ್ಠವಾಗಿ ಸಂಘಟನೆಯಾಗುತ್ತಿದ್ದು, ಸರಕಾರದ ಸವಲತ್ತುಗಳನ್ನು ಪಡೆಯಲು ಸಾಕಷ್ಟು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ನೇತ್ರದಾನ, ರಕ್ತದಾನ, ಆರೋಗ್ಯ ಶಿಬಿರದಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ಸಾಮಾಜಿಕ ಕ್ಷೇತ್ರಕ್ಕೂಕೊಡುಗೆ ನೀಡುತ್ತಿರವುದು ಅಭಿನಂದನೀಯ ಎಂದರು.
ಕೆಎಸ್‍ಟಿಎ ರಾಜ್ಯ ಅಧ್ಯಕ್ಷ ಕೆ.ಎಸ್.ಆನಂದ ಮಾತನಾಡಿದರು.ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಈಶ್ವರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯೆನಪೋಯ ಆಸ್ಪತ್ರೆ ಸಹನಿರ್ದೆಶಕ ಡಾ. ಪೂನಮ್ ಆರ್. ನಾಯಕ್, ನೇತ್ರ ತಜ್ಞ ಡಾ. ಅಶ್ವಿನ್ ನಾಯಕ್ ಸುಜೀರು, ರೆಡ್‍ಕ್ರಾಸ್ ಸೊಸೈಟಿಯ ಮುಖ್ಯಸ್ಥ ಡಾ. ಎಡ್ವರ್ಡ್ ವಾಸ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ದೇವದಾಸ್ ಪುತ್ರನ್, ತಾಪಂ ಉಪಾದ್ಯಕ್ಷ ಅಬ್ಬಾಸ್ ಅಲಿ ಭಾಗವಹಿಸಿದ್ದರು. ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್ ಸ್ವಾಗತಿಸಿ, ಕ್ಷೇತ್ರ ಸಮಿತಿ ಕಾರ್ಯದರ್ಶಿ ಸಹಕರಿಸಿದರು.