ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ
Update: 2018-01-29 23:07 IST
ಬಂಟ್ವಾಳ, ಜ. 29: ತುಂಬೆಯಿಂದ ಪಿಲಿಚಾಮುಂಡಿ ದೈವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 5 ಲಕ್ಷ ರೂ. ವೆಚ್ಚದ ನೂತನ ಕಾಂಕ್ರೀಟ್ ರಸ್ತೆಯನ್ನು ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಜಯರಾಮ ಸಾಮಾನಿ ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮಾಜಿ ಸದಸ್ಯ ಉಮರ್ ಫಾರೂಕ್, ಪುದು ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯ ರಮ್ಲಾನ್, ಗಣೇಶ್ ಸಾಲ್ಯಾನ್, ಮೋನಪ್ಪ ಮಜಿ, ಪ್ರವೀಣ್, ದಯಾನಂದ ಪೂಜಾರಿ, ಇಮ್ತಿಯಾಝ್ ತುಂಬೆ, ಭಾಸ್ಕರ ಕುಲಾಲ್, ನಿಸಾರ್ ತುಂಬೆ ಉಪಸ್ಥಿತರಿದ್ದರು.