×
Ad

ಝೇಂಕಾರ್ ಕಲಾ ಪ್ರತಿಭೋತ್ಸವದಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ

Update: 2018-01-29 23:12 IST

ಭಟ್ಕಳ,ಜ.29: ಇಲ್ಲಿನ ಝೇಂಕಾರ ಮೆಲೋಡೀಸ್ ಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ್ದ ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಭರತನಾಟ್ಯದಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕನ್ನು ಪಡೆದ ಧನಲಕ್ಷ್ಮೀ ಮೊಗೇರ, ಚಿತ್ರಕಲೆಯಲ್ಲಿ ರಾಜ್ಯಕ್ಕೆ 2ನೆ ರ್ಯಾಂಕ್ ಪಡೆದ ಬಿ. ಅನುಷಾ ಹಾಗೂ 8ನೆ ರ್ಯಾಂಕ್ ಪಡೆದ ಅರ್ಪಿತಾ ನಾಯ್ಕ ಇವರಿಗೆ ಶಾಸಕ ಮಂಕಾಳು ವೈದ್ಯ ಸನ್ಮಾನಿಸಿ ಗೌರವಿಸಿದರು.

ನಂತರ ಮಾತನಾಡಿದ ಅವರು, ಕಲಾಪ್ರತಿಭೆಗಳನ್ನು ಬೆಳೆಸುವುದರಲ್ಲಿ ಝೇಂಕಾರ್ ಸಂಸ್ಥೆ ಮುಂಚೂಣಿಯಲ್ಲಿದೆ, ಶಿಕ್ಷಣವು ಯಾವುದೇ ರೀತಿಯಲ್ಲಿ ಸಿಕ್ಕರೂ ಅದನ್ನು ಗಳಿಸಿಕೊಳ್ಳಬೇಕು ಎಂದ ಅವರು  ತಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕಾಗಿ ತಾವು ಯಾವುದೇ ರೀತಿಯಲ್ಲಿ ಕೊರತೆ ಬಾರದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ್, ಝೇಂಕಾರ ವಿದ್ಯಾರ್ಥಿಗಳಲ್ಲಿ ಪ್ರತಿಭೆಯಿದೆ ಇದನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಜವಾಬ್ದಾರಿ ಸಂಸ್ಥೆಯದ್ದಾಗಿದ್ದು ಈ ನಿಟ್ಟಿನಲ್ಲಿ ಝೇಂಕಾರ್ ಸಂಸ್ಥೆ ಕ್ರಿಯಶೀಲಾವಾಗಿದೆ ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ನಾಗಯಕ್ಷೆ ಸಂಸ್ಥಾನದ ರಾಮದಾಸ ಪ್ರಭು, ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಜನತಾವಿದ್ಯಾಲಯ ಶಿರಾಲಿಯ ಪ್ರಾಂಶುಪಾಲ  ಅಮೃತ ರಾಮರಥ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಪ್ರಸ್ತಾವಿಕವಾಗಿ ಮಾತನಾಡಿ ವರದಿ ವಾಚಿಸಿದರು. ಕಲಾ ಶಿಕ್ಷಕ ಸಂಜಯ ಗುಡಿಗಾರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ವೆಂಕಟ್ರಮಣ ಮೊಗೇರ, ಕೆ. ಆರ್. ನಾಯ್ಕ ಹಾಗೂ ಉದಯ ಶೆಟ್ಟಿ ಉಪಸ್ಥಿತರಿದ್ದರು. 

ಸಭಾ ಕಾರ್ಯಕ್ರಮದ ನಂತರ ವಿದೂಷಿ ನಯನಾ ಪ್ರಸನ್ನ ನಿರ್ದೇಶನದಲ್ಲಿ ನೃತ್ಯ ಕಾರ್ಯಕ್ರಮ, ವೆಂಕಟೇಶ ಭಟ್ಟ ನಿರ್ದೇಶನದಲ್ಲಿ ಕರ್ನಾಟಕ ಸಂಗೀತ ಕಾರ್ಯಕ್ರಮ ಹಾಗೂ ರಾಜಾರಾಮ ಪ್ರಭು ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಚಲನಚಿತ್ರ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News