ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲೋತ್ಸವ
ಮಂಗಳೂರು, ಜ. 30: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಫೆ.1ರಿಂದ ರಾಷ್ಟ್ರೀಯ ಮಟ್ಟದ ಕಲೋತ್ಸವವು ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಿಶೋರ್ ಆಳ್ವಾ ಹಾಗೂ ಗೌರವ ಅತಿಥಿಯಾಗಿ ಗೋವಿಂದ ಪದ್ಮಸೂರ್ಯ ಇವರುಗಳು ಉಪಸ್ಥಿತರಿರುವರು. ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಅವಕಾಶವನ್ನು ಒದಗಿಸುವುದೇ ಈ ಉತ್ಸವದ ಪ್ರಧಾನ ಉದ್ದೇಶ. ಕಾಲೇಜು ಪ್ರತಿ ವರ್ಷದಂತೆ ಈ ಬಾರಿಯೂ ತನ್ನ ಒಂದೇ ಸೂರಿನಡಿಯಲ್ಲಿ ಆರ್ಟ್ ಬೀಟ್, ಕೋಂಪೊಸಿಟ್, ಇಂಪ್ರಿಂಟ್ಸ್, ಆಕ್ಮಿ, ಸ್ಪಿನಾಟ್, ಅಲೋಶಿಯಡ್ ಮತ್ತು ಅಸ್ತಿತ್ವ ವನ್ನು ಹಮ್ಮಿಕೊಳ್ಳಲಾಗಿದೆ. ಭಾರತದಾದ್ಯಂತ 1,700 ಕ್ಕೂ ಮಿಕ್ಕ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿರುವರು. ಕಲಾ ವಿಭಾಗವು ನಡೆಸುವ ಆರ್ಟ್ ಬೀಟ್ 2018 ಭವ್ಯ- ಪರಂಪರೆಯ ದೃಶ್ಯಾವಳಿ, ಗಣಕ ವಿಜ್ಞಾನ ವಿಭಾಗವು ತಂತ್ರಜ್ಞಾನ ಸಮರ, ವಿಜ್ಞಾನ ವಿಭಾಗವು ಯಧಾದೃಶ್ಯರೂಪಣ, ವಾಣಿಜ್ಯ ವಿಭಾಗವು ಅರ್ಕೇಡಿಯನ್ ರೈನ್, ನಿರ್ವಾಹಣಾ ವಿಭಾಗವು ಬಟರ್ ಪ್ಲೈ ಎಫೆಕ್ಟ್ ಹಾಗೂ ಕ್ರೀಡಾ ವಿಭಾಗವು ರಾಷ್ಟ್ರ ಮಟ್ಟದ ಅಲೋಶಿಯಡ್ ಉತ್ಸವವನ್ನು ಅಸ್ತಿತ್ವವು ಕಲಾನ್ವೇಷಣೆಗೆ ಎಂಬ ಸ್ಪರ್ಧೆಯನ್ನು ಏರ್ಪಡಿಸಿದ್ದು ವಸ್ತು ಪ್ರದರ್ಶನವನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದೆ. ಪ್ರಾಂಶುಪಾಲ ಫಾ. ಪ್ರವೀಣ್ ಮಾರ್ಟಿಸ್, ರಿಜಿಸ್ಟ್ರಾರ್ ಎ. ಎಂ. ನರಹರಿ, ಮುಕುಂದ ಪ್ರಭು, ಆಮಾನ್ ಅಹ್ಮದ್ ಹಾಗು ಇತರರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.