ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್: ಈಜು ಸ್ಪರ್ಧೆಗೆ ನೀಲ್ ಮಸ್ಕರೇನ್ಹಸ್ ಆಯ್ಕೆ
Update: 2018-01-30 19:24 IST
ಪುತ್ತೂರು, ಜ. 30: ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ ಈಜು ಸ್ಪರ್ಧೆಗಳು ಫೆ. 1ರಿಂದ 4ರ ತನಕ ಹೊಸದಿಲ್ಲಿಯ ತಾಲ್ಕೊಟ್ಟರದ ಡಾ ಎಸ್ಪಿಎಮ್ ಸ್ವಿಮ್ಮಿಂಗ್ ಕಾಂಪ್ಲೆಕ್ಸ್ನಲ್ಲಿ ನಡೆಯಲಿದ್ದು, 17ರ ವಯೋಮಿತಿಯ 200ಮೀ ಬ್ರೆಸ್ಟ್ ಸ್ಟ್ರೋಕ್ನಲ್ಲಿ ಭಾಗವಹಿಸಲು ಸಂತ ಫಿಲೋಮಿನಾ ಪ್ರೌಢ ಶಾಲೆಯ 9ನೆಯ ತರಗತಿಯ ವಿದ್ಯಾರ್ಥಿ ನೀಲ್ ಮಸ್ಕರೇನ್ಹಸ್ ಆಯ್ಕೆಯಾಗಿದ್ದಾರೆ.
ನೀಲ್ ಮಸ್ಕರೇನ್ಹಸ್ ಅವರು ಸಂತ ಫಿಲೋಮಿನಾ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ನೋರ್ಬರ್ಟ್ ಮಸ್ಕರೇನ್ಹಸ್ ಮತ್ತು ಕನ್ಯಾನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ಕ್ರಾಸ್ತಾ ದಂಪತಿಯ ಪುತ್ರ.
ಪುತ್ತೂರು ಅಕ್ವಾಟಿಕ್ ಕ್ಲಬ್ ಸದಸ್ಯರಾಗಿರುವ ಅವರಿಗೆ ಪರ್ಲಡ್ಕದಲ್ಲಿರುವ ಡಾ.ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಪಾರ್ಥ ವಾರಣಾಸಿ, ನಿರೂಪ್ ಜಿ ಆರ್, ಮತ್ತು ವಸಂತ ಕುಮಾರ್ ಮತ್ತು ರೋಹಿತ್ ತರಬೇತು ನೀಡಿದ್ದರು.