ಹಜ್‌ಗೆ ತೆರಳಲು 5 ಬಾರಿ ವಿಫಲ ಅರ್ಜಿ ಸಲ್ಲಿಸಿದವರ ವರದಿ ನೀಡಿ: ಸುಪ್ರೀಂ

Update: 2018-01-30 14:36 GMT

ಹೊಸದಿಲ್ಲಿ, ಜ.30: ಹಜ್‌ಗೆ ತೆರಳಲು ಐದು ಬಾರಿ ಅರ್ಜಿ ಸಲ್ಲಿಸಿದರೂ ವಿಫಲರಾಗಿರುವ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳ ವಿವರಗಳನ್ನು ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರದಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ನ್ಯಾಯಾಧೀಶರಾದ ಎ.ಎಂ ಖಾನ್ವಿಲ್ಕರ್ ಮತ್ತು ಡಿ.ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ಈ ಬಗ್ಗೆ ಫೆಬ್ರವರಿ 19ರಂದು ಮುಂದಿನ ವಿಚಾರಣೆ ವೇಳೆ ವರದಿ ಒಪ್ಪಿಸುವಂತೆ ಸರಕಾರಕ್ಕೆ ಆದೇಶಿಸಿದೆ.

ಕೇರಳದಲ್ಲಿ ಹಜ್‌ಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಅರ್ಜಿಯನ್ನು ಹಾಕುತ್ತಾರೆ. ಆದರೆ ಕೇರಳಕ್ಕೆ ಬಿಡುಗಡೆಯಾಗಿರುವ ಸೀಟುಗಳು ಕಡಿಮೆ. ಆದರೆ ಬಿಹಾರದಲ್ಲಿ ಅತ್ಯಂತ ಕಡಿಮೆ ಜನರು ಹಜ್‌ಗೆ ತೆರಳಲು ಅರ್ಜಿ ಹಾಕುತ್ತಿದ್ದರೂ ಆ ರಾಜ್ಯಕ್ಕೆ ಹೆಚ್ಚಿನ ಹಜ್ ಸೀಟುಗಳನ್ನು ನೀಡಲಾಗಿದೆ ಎಂದು ವಾದಿಸಿ ಕೇರಳ ರಾಜ್ಯ ಹಜ್ ಸಮಿತಿಯು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಶ್ರೇಷ್ಠ ನ್ಯಾಯಾಲಯ ಈ ಆದೇಶವನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News