×
Ad

ಕೆ.ಸಿ.ರೋಡು: ಹಿದಾಯತ್‌ನಗರ ಮಸೀದಿಯ ಮೇಲಂತಸ್ತು ಉದ್ಘಾಟನೆ

Update: 2018-01-30 22:37 IST

ಉಳ್ಳಾಲ, ಜ. 30: ಅತ್ಯಂತ ಸಣ್ಣ ಪ್ರದೇಶದಲ್ಲಿ 20 ವರ್ಷಗಳ ಹಿಂದೆ ಆರಂಭಗೊಂಡ ಮಸೀದಿಯಲ್ಲಿ ಹಲವು ಯೋಜನೆಗಳ ಮುಖಾಂತರ ಸ್ಥಳೀಯರನ್ನು ಸುಶಿಕ್ಷಿತರನ್ನಾಗಿಸುವ ಪ್ರಯತ್ನ ನಡೆಸಲಾಗಿದೆ ಎಂದು ಅಲ್-ಹಿದಾಯ ಜುಮಾ ಮಸೀದಿ ಅಧ್ಯಕ್ಷ ಎನ್.ಎಸ್.ಉಮರ್ ಮಾಸ್ಟರ್ ಹೇಳಿದರು.

ರವಿವಾರ ನಡೆದ ಕೆ.ಸಿ.ರೋಡು ಸಮೀಪದ ಹಿದಾಯತ್‌ನಗರ ಅಲ್ ಹಿದಾಯ ಜುಮಾ ಮಸೀದಿಯ ಮೇಲಂತಸ್ತು ಉದ್ಘಾಟನೆ, ಮೆಹ್‌ಫಿಲೇ ತ್ವೈಬಾ ಹಾಗೂ ಶೈಖ್ ರಿಫಾಯೀ ಅನುಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಸೀದಿ ವತಿಯಿಂದ 13 ವಿದ್ಯಾರ್ಥಿಗಳಿಗೆ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸ ನೀಡಲಾಗುತ್ತಿದ್ದು, ಮದರಸ ಬಿಟ್ಟವರಿಗೆ ವಿಶೇಷ ತರಗತಿ ನೀಡಲಾಗುತ್ತಿದೆ. ಮಂಗಳವಾರ ಮಹಿಳೆಯರಿಗಾಗಿಯೇ ಪ್ರತ್ಯೇಕ ತರಗತಿ ನಡೆಸಲಾಗುತ್ತಿದೆ. ಶುಕ್ರವಾರ ಮೂರು ಶಾಲೆಗಳಿಂದ 500ರಷ್ಟು ವಿದ್ಯಾರ್ಥಿಗಳು ನಮಾಝಿಗೆ ಬರುತ್ತಿದ್ದು ಈ ನಿಟ್ಟಿನಲ್ಲಿ ಮಸೀದಿ ವಿಸ್ತರಿಸುವ ಯೋಜನೆಗೆ ದಾನಿಗಳು ಹಿಂದೇಟು ಹಾಕದೆ ಸಹಕರಿಸಿದ್ದಾರೆ ಎಂದರು.

ಕೆ.ಸಿ.ರೋಡ್ ಸಿಟಿಎಮ್ ಸಲೀಂ ಅಸ್ಸಖಾಫ್ ತಂಙಳ್ ದುಆ ಮಾಡಿದರು. ಕಾಸರಗೋಡು ಜಾಮಿಯಾ ಸಅದಿಯಾ ಪ್ರೊಫೆಸರ್ ಅಲ್‌ಹಾಜ್ ಕೆ.ಪಿ. ಹುಸೈನ್ ಸಅದಿ ನೇತೃತ್ವ ವಹಿಸಿದ್ದರು. ಆಹಾರ ಸಚಿವ ಯು.ಟಿ.ಖಾದರ್, ಸದರ್ ಮುಅಲ್ಲಿ ಅಬ್ದುಲ್ ಅಝೀರ್ ಸಖಾಫಿ, ಮುಅಲ್ಲಿಂ ಅಶ್ರಫ್ ಅಮ್ಜದಿ, ಕಾರ್ಯದರ್ಶಿ ಝುಬೈರ್ ಝುಹುರಿ, ಎಸ್.ಎಸ್.ಎಫ್ ಹಿದಾಯತ್ ನಗರ ಅಧ್ಯಕ್ಷ ಶಬೀರ್ ಅಝ್ಹರಿ, ಪ್ರಮುಖರಾದ ಪಿ.ಎಮ್.ಮುಹಮ್ಮದ್ ಮದನಿ, ಕೆ.ಎಸ್.ಮೊದಿನ್ ಬಾವ ತಲಪಾಡಿ, ಉದ್ಯಮಿಗಳಾದ ಮೊದಿನ್ ಸ್ವಾಲಿಹ್, ಅನ್ವರ್ ಹುಸೈನ್ ಉಳ್ಳಾಲ, ಮೂಸ ಕೆ.ಸಿ.ನಗರ, ಅಬ್ಬಾಸ್ ಪೆರಿಬೈಲ್, ಯು.ಬಿ.ಮುಹಮ್ಮದ್, ಇಕ್ಬಾಲ್, ಪಿ.ಎ. ಅಹ್ಮದ್ ಕುಂಞಿ, ಸುಲೈಮಾನ್, ಅಬ್ದುಲ್ ಖಾದರ್, ಮಜೀದ್ ಹಸನ್, ಕೆ.ಎಫ್ ಅಬ್ದುಲ್, ನಝೀರ್, ಇಬ್ರಾಹಿಂ ಪೂಮನ್ನು ತಲಪಾಡಿ, ಅಬ್ಬಾಸ್, ಹನೀಫ್ ಕೋಟೆಪುರ, ವಕ್ಫ್ ಸಮಿತಿ ಸದಸ್ಯ ಉಸ್ಮಾನ್, ಶರೀಫ್ ಮಿಲ್ಲತ್‌ನಗರ, ಅಹ್ಮದ್ ಬಾವ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಬಶೀರ್, ಎಮ್.ಎಮ್. ಅಬ್ದುಲ್, ರಹೀಂ ಯು.ಬಿ.ಎಮ್, ಅಬ್ದುಲ್ ಬಶೀರ್, ಮುನೀರ್ ಎಸ್.ಎಚ್, ಬಶೀರ್ ಎಸ್.ಎಚ್ ಮೊದಲಾ ದವರು ಉಪಸ್ಥಿತರಿದ್ದರು. ಮಸೀದಿಯ ಖತೀಬ್  ಅಹ್ಮದ್ ಕಬೀರ್ ಸಅದಿ ಉಳ್ಳಾಲ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News