ಜ.31: ಹೆಲ್ಮೆಟ್ ಜಾಗೃತಿ ಆಂದೋಲನ
Update: 2018-01-30 22:55 IST
ಉಡುಪಿ, ಜ.30: ಜಿಲ್ಲಾ ಕಾನೂನುಗಳ ಸೇವೆಗಳ ಪ್ರಾಧಿಕಾರ ಉಡುಪಿ, ವಕೀಲರ ಸಂಘ ಉಡುಪಿ, ಆಟೋ ಕ್ಲಬ್ ಮಣಿಪಾಲ, ಮಾನವ ಹಕ್ಕುಗಳು, ಅಹವಾಲುಗಳು ಮತ್ತು ಲೀಗಲ್ ಇನ್ಪೋಪೇಜಸ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಾಳೆ ಜ.31ರಂದು ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಆಂದೋಲನ ಜಾಥಾ ನಡೆಯಲಿದೆ.
ಸಂಜೆ 4:30ಕ್ಕೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಾಥಾ ನಡೆಯಲಿದ್ದು, ಜಾಥವನ್ನು ಉಡುಪಿ ಪೊಲೀಸ್ ಅಧೀಕ್ಷಕರಾದ ಲಕ್ಷ್ನಣ ನಿಂಬರ್ಗಿ ಉದ್ಘಾಟಿಸಲಿ ದ್ದಾರೆ. ಬಳಿಕ 5 ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕಾ ಟಿ. ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.