×
Ad

'ಪ್ರೀತಿ ನೀತಿ' ಟ್ರಸ್ಟ್‌ನ ಅಧ್ಯಕ್ಷರಾಗಿ ಅಬ್ದುಲ್ ರವೂಫ್ ಪುತ್ತಿಗೆ ಆಯ್ಕೆ

Update: 2018-01-30 23:14 IST

ಮಂಗಳೂರು, ಜ. 30: ಕುಷ್ಠರೋಗಿಗಳ ಸೇವೆಗಾಗಿ ಕಾರ್ಯಾಚರಿಸುತ್ತಿರುವ ಪ್ರೀತಿ ನೀತಿ ಟ್ರಸ್ಟ್‌ನ ಅಧ್ಯಕ್ಷರಾಗಿ ವಿಶ್ವಾಸ್ ಬಾವ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ, ರಾಜ್ಯ ಜೆಡಿಎಸ್‌ನ ಪ್ರ. ಕಾರ್ಯದರ್ಶಿ ಅಬ್ದುಲ್ ರವೂಫ್ ಪುತ್ತಿಗೆ ಆಯ್ಕೆಯಾಗಿದ್ದಾರೆ.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿ ಲೈಲಾಮಣಿ ಎಸ್, ಕೋಶಾಧಿಕಾರಿಯಾಗಿ ಹರಿಶ್ಚಂದ್ರ, ಟ್ರಸ್ಟಿಗಳಾಗಿ ರೆ.ಡಾ.ಲಿಯೋ ಡಿಸೋಜ ಎಸ್.ಜೆ., ಶಾಲಿನಿ ಪಂಡಿತ್, ಅಲೋಶಿಯಸ್ ಡಿಸೋಜ, ಶಮೀಮಾ ಕುನಿಲ್, ಸೋಫಿ ಬಿದರಿ ಮತ್ತು ಸಂತೋಷ್ ಸಿಕ್ವೇರಾ ಆಯ್ಕೆಯಾಗಿದ್ದಾರೆ. ದಿವಂಗತ ಜುಡಿತ್ ಮಸ್ಕರೇನಸ್, ಸ್ಥಾಪಕಾಧ್ಯಕ್ಷೆಯಾಗಿದ್ದ ಈ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ದಿವಂಗತ ಸೆಲಿನ್ ಪಿರೇರಾ ಸೇವೆ ಸಲ್ಲಿಸಿದ್ದರು.

ಕುಷ್ಟರೋಗಿಗಳ ಸೇವೆಗಾಗಿಯೇ ಜುಡಿತ್ ಮಸ್ಕರೇನಸ್ ಸ್ಥಾಪಿಸಿದ ಈ ಸಂಸ್ಥೆಯು ಐಕಳ, ಬಳ್ಳಣ ಮತ್ತು ನಡುಗೋಡು ಪ್ರದೇಶಗಳಲ್ಲಿ 18 ಫಲಾನುಭವಿ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಟ್ಟು ಅವರಿಗೆ ಪುನರ್ವಸತಿ ಕಲ್ಪಿಸಿದೆ. ಮಂಗಳೂರು ನಗರದ ಕದ್ರಿ ಕಮಾಂಡರ್ ಜಾರ್ಜ್ ಮಾರ್ಟಿಸ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಕಚೇರಿಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News