×
Ad

ಶಾರುಕ್‌ಖಾನ್ ಬಂಗ್ಲೆ ಜಪ್ತಿ !

Update: 2018-01-30 23:25 IST

ಮುಂಬೈ, ಜ.30: ಬಾಲಿವುಡ್ ನಟ ಶಾರುಕ್ ಖಾನ್ ಒಡೆತನದ ಮಹಾರಾಷ್ಟ್ರದ ಅಲಿಬಾಗ್ ಪ್ರದೇಶದಲ್ಲಿರುವ ಅದ್ದೂರಿ ಫಾರ್ಮ್‌ಹೌಸನ್ನು ಆದಾಯ ತೆರಿಗೆ ಇಲಾಖೆ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ದೆಜ ವು ಫಾರ್ಮ್ಸ್ ಪ್ರೈ.ಲಿ. ಎಂಬ ಹೆಸರಿನಲ್ಲಿ ನೋಂದಣಿಯಾಗಿರುವ ಈ ಫಾರ್ಮ್ ಹೌಸನ್ನು ಬೇನಾಮಿಯಾಗಿ ನೋಂದಣಿ ಮಾಡಲಾಗಿದೆ. ಅಲ್ಲದೆ ಕೃಷಿಕಾರ್ಯಕ್ಕೆ ಭೂಮಿ ಖರೀದಿಸುವುದಾಗಿ ಹೇಳಿದ್ದ ಖಾನ್ ತಮ್ಮ ವೈಯಕ್ತಿಕ ಉಪಯೋಗಕ್ಕಾಗಿ ಫಾರ್ಮ್‌ಹೌಸ್ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ.

 2004ರಲ್ಲಿ ಶ್ರೀನಿವಾಸ ಪಾರ್ಥಸಾರಥಿ ಹಾಗೂ ಸೋಮಶೇಖರ್ ಸುಂದರೇಶನ್ ಸೇರಿಕೊಂಡು ದೆಜ ವು ಫಾರ್ಮ್ಸ್ ನಿರ್ಮಿಸಿದ್ದರು. ಬಳಿಕ ಅದೇ ವರ್ಷ ಶೇರು ಪತ್ರಗಳನ್ನು ಶಾರೂಕ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಹೆಸರಿಗೆ ವರ್ಗಾಯಿಸಲಾಗಿದೆ. ಅದೇ ದಿನ ರಮೇಶ್ ಛಿಬ, ಸವಿತಾ ಛಿಬ ಹಾಗೂ ರಾಜಾರಾಮ್ ಅಜ್‌ಗಾಂವ್‌ಕರ್ ಅವರನ್ನು ಪ್ರಥಮ ನಿರ್ದೇಶಕರೆಂದು ಹೆಸರಿಸಲಾಗಿತ್ತು. ರಾಜಾರಾಮ್ ತನ್ನನ್ನು ಕೃಷಿಕ ಎಂದು ಹೇಳಿಕೊಂಡಿದ್ದರು ಎಂದು ತೆರಿಗೆ ಇಲಾಖೆ ತಿಳಿಸಿದೆ. ಈ ವ್ಯವಹಾರದಲ್ಲಿ ಭಾರೀ ಅಕ್ರಮ ನಡೆದಿರುವುದಾಗಿ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News