ಹಳೆಕೋಟೆ: ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ‘ಗೆಲುವಿಗೊಂದು ಸುಗಮ ಹಾದಿ’

Update: 2018-01-30 18:08 GMT

ಉಳ್ಳಾಲ, ಜ. 30: ಜಮೀಯ್ಯತುಲ್ ಫಲಾಹ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಜಂಟಿಯಾಗಿ ಎಸೆಸೆಲ್ಸಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯ ಬಗ್ಗೆ ಮತ್ತು ಪ್ರತಿ ವಿಷಯದಲ್ಲೂ  ಅಂಕ ಗಳಿಸುವ ತಾಂತ್ರಿಕತೆಯನ್ನು ತಿಳಿಸುವ ‘ಗೆಲುವಿಗೊಂದು ಸುಗಮ ಹಾದಿ’ ಎಂಬ ಕಾರ್ಯಕ್ರಮವನ್ನು ಉಳ್ಳಾಲದ ಹಳೆಕೋಟೆ ಸಯ್ಯದ್ ಮದನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿ ಶಾಹುಲ್ ಹಮೀದ್ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ.ಶಿವರಾಮ್ಯ, ಜಮೀಯ್ಯತುಲ್ ಫಲಾಹ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್ ,ಲೋಕನಾಥ್ ರೈ , ಜಮೀಯ್ಯತುಲ್ ಫಲಾಹ್ ಸದಸ್ಯ ಅಬ್ದುಲ್ ರಝಾಕ್ ಮೊದಲಾದವರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಶಾಂತಾ, ಚಂಚಾಲಾಕ್ಷಿ , ವಾಣಿಶ್ರೀ, ಪ್ರಮೀಳಾ ಭಾಗವಹಿಸಿದ್ದರು.ಜಮೀಯ್ಯತುಲ್ ಫಲಾಹ್ ಕಾರ್ಯದರ್ಶಿ ಎಂ.ಎಚ್.ಮಲಾರ್ ಸ್ವಾಗತಿಸಿ, ಕೋಶಾಧಿಕಾರಿ ಕೆ.ಎಂ.ಕೆ.ಮಂಜನಾಡಿ ವಂದಿಸಿದರು. ಶಿಕ್ಷಣ ಸಂಯೋಜಕಿ ಹಿಲ್ಡಾ, ಕ್ಲಮೇನ್ಸಿಯಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಉಳ್ಳಾಲದ ವಿವಿಧ ಶಾಲೆಗಳ 175 ಮಂದಿ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News