ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತದ 27 ಶೂಟರ್‌ಗಳು ಆಯ್ಕೆ

Update: 2018-01-30 18:56 GMT

ಹೊಸದಿಲ್ಲಿ, ಜ.30: ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತದ ಅಗ್ರ ಶೂಟರ್‌ಗಳಾದ ಜಿತು ರಾಯ್, ಗಗನ್ ನಾರಂಗ್, ಅಪೂರ್ವಿ ಚಾಂಡೆಲಾ ಸೇರಿದಂತೆ 27 ಶೂಟರ್‌ಗಳ ತಂಡವನ್ನು ಆಯ್ಕೆ ಮಾಡಲಾಗಿದೆ.

  ಭಾರತದ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್(ಎನ್‌ಆರ್‌ಎಐ) 27 ಮಂದಿ ಶೂಟರ್‌ಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ 25 ಪುರುಷ ಮತ್ತು 12 ಮಹಿಳಾ ಶೂಟರ್‌ಗಳು ಸ್ಥಾನಗಿಟ್ಟಿಸಿ ಕೊಂಡಿದ್ದಾರೆ. 2014ರಲ್ಲಿ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ 30 ಶೂಟರ್‌ಗಳು ಸ್ಪರ್ಧಿಸಿದ್ದರು. ಭಾರತ 17 ಪದಕ(4ಚಿನ್ನ, 9 ಬೆಳ್ಳಿ, 4 ಕಂಚು) ಪಡೆದಿತ್ತು. ಕಾಮನ್‌ವೆಲ್ತ್ ಗೇಮ್ಸ್ ಬ್ರಿಸ್ಬೇನ್‌ನಲ್ಲಿ ಎ.8ರಿಂದ 14ರ ತನಕ ನಡೆಯಲಿದೆ. ಪುರುಷರ ವಿಭಾಗದಲ್ಲಿ 9 ಮತ್ತು ಮಹಿಳಾ ವಿಭಾಗದಲ್ಲಿ 8 ಸ್ಪರ್ಧೆಗಳು ನಡೆಯಲಿದೆ. ರೈಫಲ್, ಪಿಸ್ತೂಲ್ ಮತ್ತು ಶಾಟ್‌ಗನ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.

ರಾಯ್, ನಾರಂಗ್, ಇವರೊಂದಿಗೆ ದೇಶದ ಅಗ್ರ ಶೂಟರ್‌ಗಳಾದ ಸಂಜೀವ್ ರಜಪೂತ್, ಮನ್ವಿಜಿತ್ ಸಿಂಗ್ ಸಂಧು ಮತ್ತು ಮುಹಮ್ಮದ್ ಅಸಾಬ್ ಸ್ಪರ್ಧಾ ಕಣದಲ್ಲಿದ್ದಾರೆ.

ಮಹಿಳಾ ವಿಭಾಗದಲ್ಲಿ ಹೀನಾ ಸಿಧು, ಯುವ ಶೂಟರ್ ಮೆಹುಲಿ ಘೋಷ್ ಮತ್ತು ಮನು ಭಾಸ್ಕರ್ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News