ನಿಷ್ಪಕ್ಷಪಾತ ಪಿಚ್ ನಿರ್ಮಾಣಕ್ಕೆ ವೆಂಗ್‌ಸರ್ಕಾರ್ ಆಗ್ರಹ

Update: 2018-01-30 18:58 GMT

ಚೆನ್ನೈ, ಜ.30: ಪಿಚ್ ನಿರ್ಮಾಣವು ಯಾವುದೇ ತಂಡಕ್ಕೆ ಸೀಮಿತವಾಗಿರಬಾರದು. ಪಿಚ್ ನಿರ್ಮಿಸುವ ಕ್ಯುರೇಟರ್ ನಿಷ್ಪಕ್ಷಪಾತ ಧೋರಣೆ ಅನುಸರಿಸಬೇಕೆಂದು ಭಾರತದ ಕ್ರಿಕೆಟ್ ತಂಡ ಮಾಜಿ ನಾಯಕ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥ ವೆಂಗ್‌ಸರ್ಕಾರ್ ಅಭಿಪ್ರಾಯಪಟ್ಟರು.

 ಪಿಚ್ ನಿರ್ಮಿಸುವಲ್ಲಿ ಯಾವುದೇ ಪಕ್ಷಪಾತ ವಿರಬಾರದೆಂದು ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ ಪಿಚ್ ನಿರ್ಮಾಣದಲ್ಲಿ ಪಕ್ಷಪಾತ ಧೋರಣೆ ಅನುಸರಿಸುವುದು ಉತ್ತಮ ಬೆಳವಣಿಗೆಯಲ್ಲ ಎಂದರು.

''ದಕ್ಷಿಣ ಆಫ್ರಿಕ ವಿರುದ್ಧ 3ನೇ ಟೆಸ್ಟ್ ಆಡಿದ್ದ ವಾಂಡರರ್ಸ್‌ ಪಿಚ್ ತೀವ್ರತರವಾದ ಬೌನ್ಸ್ ಹೊಂದಿತ್ತು. ಇದು ತುಂಬಾ ಕಳಪೆ ಮಟ್ಟದ ಪಿಚ್ ಆಗಿತ್ತು. ನಿಷ್ಷಕ್ಷಪಾತವಾಗಿ ವಿದೇಶಗಳ ಪಿಚ್ ನಿರ್ಮಿಸಲು ಕ್ಯುರೇಟರ್‌ಗಳಿಗೆ ಸೂಚಿಸಲು ಐಸಿಸಿಗೆ ಇದು ಸಕಾಲ. ಐಸಿಸಿಯಲ್ಲಿ ತಟಸ್ಥ ಅಂಪಾಯರ್‌ಗಳಿದ್ದರೆ, ಕ್ಯುರೇಟರ್‌ಗಳು ಕೂಡ ತಟಸ್ಥರಾಗಿರಬೇಕು'' ಎಂದು ವೆಂಗ್ ಸರ್ಕಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News