ಬಂಟ್ವಾಳ: ಮಹಿಳೆಯೊಂದಿಗೆ ಅಸಭ್ಯ ವರ್ತನೆ; ಆರೋಪಿ ಸೆರೆ
Update: 2018-01-31 17:32 IST
ಬಂಟ್ವಾಳ, ಜ. 31: ಮಹಿಳೆಯೋರ್ವರು ಸ್ನಾನ ಮಾಡುತ್ತಿದ್ದ ಸಂದರ್ಭ ಇಣುಕಿ ನೋಡಿದ ಆರೋಪದಡಿ ಸ್ಥಳೀಯ ಯುವಕನೋರ್ವನನ್ನು ಬಂಟ್ವಾಳ ನಗರ ಠಾಣೆ ಪೋಲಿಸರು ಬುಧವಾರ ಬಂಧಿಸಿದ್ದಾರೆ.
ಚೆಂಡ್ತಿಮಾರ್ ನಿವಾಸಿ ಸಮರ್ಥ (22) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಇಲ್ಲಿನ ಮಹಿಳೆಯೋರ್ವರು ಇಂದು ಮುಂಜಾನೆ ಮನೆಯಲ್ಲಿ ಸ್ನಾನ ಮಾಡುವ ಸಂದರ್ಭ ಸಮೀಪದ ಮನೆಯ ನಿವಾಸಿ ಸಮರ್ಥ ಎಂಬಾತ ಇಣುಕಿ ನೋಡಿ ದ್ದಾನೆ ಎಂದು ಆರೋಪಿಸಿ ಮಹಿಳೆ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.