×
Ad

ಫೆ. 6ರಿಂದ ಗುಡ್ಡೆಅಂಗಡಿಯಲ್ಲಿ ಉರೂಸ್ ಕಾರ್ಯಕ್ರಮ

Update: 2018-01-31 17:39 IST

ಬಂಟ್ವಾಳ, ಜ. 31: ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಹಝ್ರತ್ ಶೈಖ್ ಮೌಲವಿ (ನ.ಮ) ದರ್ಗಾ ಶರೀಫಿನ 38ನೆ ವರ್ಷದ ಉರೂಸ್ ಕಾರ್ಯಕ್ರಮ ಫೆ. 6 ರಿಂದ 11ರವರೆಗೆ ನಡೆಯಲಿದೆ.

ಫೆ. 6ರಂದು ಬೆಳಗ್ಗೆ ಅತ್ರಾಡಿ ಖಾಝಿ ಹಾಜಿ ವಿ.ಕೆ. ಅಬೂಬಕರ್ ಮುಸ್ಲಿಯಾರ್ ಅವರು ಉರೂಸ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಫೆ. 10ರಂದು ಮಗ್ರಿಬ್ ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಸೈಯದ್ ಫಕ್ರುದ್ದೀನ್ ಹಸನಿ ಅಲ್-ಖಾದಿರಿ ದಾರಿಮಿ ತಂಙಳ್ ತಾನೂರು-ಕೇರಳ ಅವರು ದುವಾಶಿರ್ವಚನ ಮಾಡುವರು. ಸ್ಥಳೀಯ ಖತೀಬ್ ಉಸ್ಮಾನ್ ರಾಝಿ ಬಾಖವಿ ಅಲ್-ಹೈತಮಿ ಮುಖ್ಯ ಭಾಷಣ ಮಾಡುವರು. ಮಸೀದಿ ಅಧ್ಯಕ್ಷ ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್ ಬಂಟ್ವಾಳ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಮೋನು ಕಣಚೂರು ಮೊದಲಾದವರು ಭಾಗವಹಿಸಲಿದ್ದಾರೆ.

ಫೆ. 11ರಂದು ಹಗಲು ಉರೂಸ್ ಕಾರ್ಯಕ್ರಮ ನಡೆಯಲಿದ್ದು, ಸುಬ್‌ಹಿ ನಮಾಝ್ ಬಳಿಕ ಶೈಖ್ ಮೌಲವಿ (ನ.ಮ) ಹೆಸರಿನಲ್ಲಿ ಖತಮುಲ್ ಕುರ್‌ಆನ್, ಲುಹ್‌ರ್ ನಮಾರ್ ಬಳಿಕ ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನೆರವೇರಲಿದೆ.

ಈ ಪ್ರಯುಕ್ತ ಪ್ರತಿ ದಿನ ಮಗ್ರಿಬ್ ಬಳಿಕ ನಡೆಯಲಿರುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಫೆ. 6ರಂದು ಕೆ.ಎಂ. ಅಬೂಬಕರ್ ಮದನಿ ಸಾಲೆತ್ತೂರು, ಫೆ. 7ರಂದು ಅಬ್ದುಲ್ಲ ವಹಬಿ ಆರೂರು, ಮಂಜೇರಿ, ಫೆ. 8ರಂದು ಇಬ್ರಾಹಿಂ ಖಲೀಲ್ ಹುದವಿ ಕಾಸರಗೋಡು, ಫೆ. 9ರಂದು ಸಿ.ಎಂ. ಅನ್ಸಾರ್ ಫೈಝಿ ಬುರ್‌ಹಾನಿ ಅಡ್ಯಾರ್-ಕಣ್ಣೂರು ಭಾಗವಹಿಸುವರು. ಪ್ರತಿದಿನ ನೂರುದ್ದೀನ್ ಮದ್ರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಕಮಿಟಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News