×
Ad

ಉಳ್ಳಾಲ: ಹಿಟ್ ಆ್ಯಂಡ್ ರನ್ ಪ್ರಕರಣದ ವಾಹನ ಪತ್ತೆ ಹಚ್ಚಿದ ಪೊಲೀಸರು

Update: 2018-01-31 20:36 IST

ಉಳ್ಳಾಲ, ಜ. 31: ದೇರಳಕಟ್ಟೆಯ ಬಳಿ ಮೆಸ್ಕಾಂ ವಿಧಾನ ಪರಿಷತ್ ಗ್ರಾಹಕರ ಸಲಹಾ ಸಮಿತಿ ಸದಸ್ಯೆ ಸುಹಾಸಿನಿ ಬಬ್ಬುಕಟ್ಟೆ (70) ಅವರಿಗೆ ಅಪಘಾತ ನಡೆಸಿ, ಪರಾರಿಯಾಗಿದ್ದ ಸ್ಕೂಟರನ್ನು ಮಂಗಳೂರು ಸಂಚಾರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಗಂಭೀರ ಗಾಯಗೊಂಡಿದ್ದ ಸಹಾಸಿನಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಜ. 23ರಂದು ದೇರಳಕಟ್ಟೆ ಜಂಕ್ಷನ್ ನಲ್ಲಿ  ರಸ್ತೆ ದಾಟುವ ಸಂದರ್ಭ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದ ಸ್ಕೂಟರ್ ಸವಾರನೋರ್ವ ಢಿಕ್ಕಿ ಹೊಡೆದಿದ್ದ. ರಸ್ತೆಗೆ ಬಿದ್ದಿದ್ದ ಸುಹಾಸಿನಿ ಬಬ್ಬುಕಟ್ಟೆ ಅವರನ್ನು ಸ್ಥಳೀಯರು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಪಘಾತ ನಡೆಸಿದ್ದ ಸ್ಕೂಟರ್ ಸವಾರ ಸ್ಥಳದಿಂದ ಪರಾರಿಯಾಗಿದ್ದ ಎಂದು ತಿಳಿದು ಬಂದಿತ್ತು.

ಈ ಕುರಿತು ವೈದ್ಯರೊಬ್ಬರು ನೀಡಿದ ದೂರಿನಂತೆ ಸ್ಕೂಟರ್ ಸವಾರನ ವಿರುದ್ಧ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿತ್ತು. ಸ್ಥಳೀಯವಾಗಿ ಸಂಗ್ರಹಿಸಿದ ಸಿಸಿಟಿವಿ ದಾಖಲೆಗಳ ಪ್ರಕಾರ ಅಪಘಾತ ನಡೆಸಿದ ಆಕ್ಟಿವಾ ಸ್ಕೂಟರ್‌ನ್ನು ಪತ್ತೆ ಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News