×
Ad

ಪೊಲೀಸರಿಗೆ ಮಾಹಿತಿ ನೀಡಿದ ಆರೋಪ: ವ್ಯಕ್ತಿಗೆ ಹಲ್ಲೆ

Update: 2018-01-31 22:16 IST

ಬಂಟ್ವಾಳ, ಜ. 31: ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ಆರೋಪಿಸಿ ವ್ಯಕ್ತಿಗೆ ಹಲ್ಲೆ ನಡೆಸಿ, ಆತನ ಪತ್ನಿಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ವಿಟ್ಲ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ವಿಟ್ಲದ ಉಕ್ಕುಡ ಕಾನತ್ತಡ್ಕ ನಿವಾಸಿ ಬಶೀರ್ ಬಂಧಿತ ಆರೋಪಿ. ಕಾನತ್ತಡ್ಕ ನಿವಾಸಿ ಮುಹಮ್ಮದ್ ಶರೀಫ್ ಎಂಬವರು ಉಕ್ಕುಡದಲ್ಲಿ ಖಾಸಗಿ ಕಾರ್ಯ ಕ್ರಮವೊಂದಕ್ಕೆ ತನ್ನ ಪತ್ನಿ ಜೊತೆ ಆಗಮಿಸಿದ್ದರು. ಇಲ್ಲಿಗೆ ಬಂದ ಕಾನತ್ತಡ್ಕ ನಿವಾಸಿಗಳಾದ ಇರ್ಷಾದ್, ಸಮದ್, ಹಕೀಂ ಹಾಗೂ ಬಶೀರ್ ಎಂಬವರು ಶರೀಫ್‌ ಜೊತೆ ಜಗಳವಾಡಿ 'ನೀನು ನನ್ನ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡುತ್ತೀಯಾ ಎಂದು ಬೆದರಿಸಿ ಹಲ್ಲೆ ನಡೆಸಿದ್ದು, ತಡೆಯಲು ಬಂದ ಶರೀಫ್‌ನ ಪತ್ನಿಯ ಕೈ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆ' ಎಂದು ಶರೀಫ್ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News