ಉಚ್ಚಿಲ: ‘ರಾಹುಲ್ ಗಾಂಧಿ ಟ್ರೋಫಿ’ ಕ್ರಿಕೆಟ್ ಪಂದ್ಯಾಟ
ಉಡುಪಿ, ಫೆ.1: ಉಚ್ಚಿಲ ಗ್ರಾಮೀಣ ಯುವ ಕಾಂಗ್ರೆಸ್ ವತಿಯಿಂದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟ ‘ರಾಹುಲ್ ಗಾಂಧಿ ಟ್ರೋಫಿ’ ಯನ್ನು ಇತ್ತೀಚೆಗೆ ಉಚ್ಚಿಲದಲ್ಲಿ ಆಯೋಜಿಸಲಾಗಿತ್ತು.
ಪಂದ್ಯಾಟವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ, ಕಾಂಗ್ರೆಸ್ ಯುವ ಮುಖಂಡ ಅಮೃತ್ ಶೆಣೈ ಮಾತನಾಡಿ, ರಾಷ್ಟ್ರಕ್ಕೆ ಯುವ ನಾಯಕತ್ವದ ಅಗತ್ಯ ಇದೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಸಾಮರ್ಥ್ಯ ಇರುವ ಯುವ ನಾಯಕರಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದ್ದಾರೆ ಎಂದರು.
ಈ ಸಂದರ್ಭ ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿವಾಕರ್ ಶೆಟ್ಟಿ, ವಕ್ಫ್ ಮಂಡಳಿ ಜಿಲ್ಲಾ ಉಪಾಧ್ಯಕ್ಷ ಗುಲಾಮ್ ಮುಹಮ್ಮದ್, ಎಲ್ಲೂರು ಗ್ರಾಪಂ ಸದಸ್ಯ ರಹೀಮ್ ಕುಂಜೂರ್, ತಾಪಂ ಸದಸ್ಯ ಶೇಖಬ್ಬ, ಕಾಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಣೇಶ್ ಆಚಾರ್, ಎಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷ ಯಶವಾಂತ್ ಶೆಟ್ಟಿ, ಕಾಪು ಪುರಸಭಾ ಸದಸ್ಯ ಇಮ್ರಾನ್ ಮಜೂರ್, ಬಡಾ ಗ್ರಾಪಂ ಸದಸ್ಯೆ ಪುಟ್ಟಮ್ಮ ಶ್ರೀಯಾನ್ ಉಪಸ್ಥಿತರಿದ್ದರು.