×
Ad

ಜನರು ಬಿಜೆಪಿ ತಿರಸ್ಕರಿಸುತ್ತಿರುವುದಕ್ಕೆ ರಾಜಸ್ಥಾನದ ಗೆಲುವೇ ಸಾಕ್ಷಿ: ರಾಹುಲ್

Update: 2018-02-01 19:40 IST

ಹೊಸದಿಲ್ಲಿ, ಫೆ.1: ರಾಜಸ್ಥಾನದಲ್ಲಿ ಎರಡು ಲೋಕಸಭಾ ಮತ್ತು ಒಂದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ತೋರಿದ ಪ್ರದರ್ಶನದ ಬಗ್ಗೆ ಪಕ್ಷದ ರಾಜ್ಯ ವಿಭಾಗವನ್ನು ಹೊಗಳಿದ ಅಧ್ಯಕ್ಷ ರಾಹುಲ್ ಗಾಂಧಿ ಈ ಫಲಿತಾಂಶವು ಜನರು ಬಿಜೆಪಿಯನ್ನು ತಿರಸ್ಕರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ, ಪ್ರಸ್ತುತ ಬಿಜೆಪಿ ಆಳ್ವಿಕೆಯಲ್ಲಿರುವ ರಾಜ್ಯದಲ್ಲಿ ಈ ರೀತಿ ನಿರ್ವಹಣೆ ನೀಡಲು ಸಫಲವಾಗಿರುವ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿಕೊಂಡಿದ್ದಾರೆ.

ರಾಜಸ್ಥಾನದ ಮಂಡಲ್‌ಗಡ್ ವಿಧಾನಸಭಾ ಕ್ಷೇತ್ರ ಹಾಗೂ ಆಲ್ವಾರ್ ಮತ್ತು ಅಜ್ಮೀರ್ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಆಲ್ವಾರ್‌ನಲ್ಲಿ ಕಾಂಗ್ರೆಸ್‌ನ ಕರಣ್ ಸಿಂಗ್ ಬಿಜೆಪಿಯ ಜಸ್ವಂತ್ ಯಾದವ್ ಅವರನ್ನು ಮಣಿಸಿದ್ದಾರೆ. ಅಜ್ಮೇರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಘು ಶರ್ಮಾ ಬಿಜೆಪಿಯ ಸ್ವರೂಪ್ ಲಾಂಬಾ ಅವರನ್ನು ಸೋಲಿಸಿದ್ದಾರೆ ಹಾಗೂ ಮಂಡಲ್‌ಗಡ್ ಕ್ಷೇತ್ರದಲ್ಲಿ ಬಿಜೆಪಿಯ ಶಕ್ತಿ ಸಿಂಗ್ ಹೂಡಾ ವಿರುದ್ಧ ಕಾಂಗ್ರೆಸ್‌ನ ವಿವೇಕ್ ದಕಡ್ ಜಯ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News