×
Ad

ಭಟ್ಕಳ: ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪದಾಧಿಕಾರಿಗಳ ಆಯ್ಕೆ

Update: 2018-02-01 19:44 IST

ಭಟ್ಕಳ, ಫೆ. 1: ಇಲ್ಲಿನ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ನ ನೂತನ ಅಧ್ಯಕ್ಷರಾಗಿ ಮೊಹತೆಶಮ್ ಮುಹಮ್ಮದ್ ಜಾಫರ್ (ಬರ್ನಿ), ಪ್ರಧಾನ ಕಾರ್ಯದರ್ಶಿಯಾಗಿ ಅಸ್ಕರಿ ಹಮೀದುಲ್ಲಾಹ್ ಚುನಾಯಿತಗೊಂಡಿದ್ದಾರೆ.

 ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗಾಗಿ ಪದಾಧಿಕಾರಿ ಗಳ ಆಯ್ಕೆ ನಡೆದಿದೆ.

ಪದಾಧಿಕಾರಿಗಳು:  ಉಪಾಧ್ಯಕ್ಷರಾಗಿ: ಖಮರಿ ಅಬೂಬಕರ್, ಸೈಯ್ಯದ್ ಮುಹಿದ್ದೀನ್ ಮಾರ್ಕೇಟ್, ಪ್ರಧಾನ ಕಾರ್ಯದರ್ಶಿಯಾಗಿ ಅಸ್ಕರಿ ಹಮೀದುಲ್ಲಾಹ್, ಕಾರ್ಯದರ್ಶಿಯಾಗಿ ಸಾದಾ ಮುಹಮ್ಮದ್ ಮೀರಾ, ಉಪಕಾರ್ಯದರ್ಶಿಯಾಗಿ: ಮೌಲಾನ ಅಂಜುಮನ್ ಗಂಗಾವಳಿ ನದ್ವಿ, ಹಣಕಾಸು ಕಾರ್ಯದರ್ಶಿಯಾಗಿ ಜುಬಾಪು ಇಸ್ಮಾಯಿಲ್, ಖಜಾಂಚಿಯಾಗಿ ಮೊಹತೆಶಮ್ ಮುಹಮ್ಮದ್ ನಾಸಿರ್, ಲೆಕ್ಕ ಪರಿಶೋಧಕರಾಗಿ ಶಾಬಂದ್ರಿ ಇಸ್ಮಾಯಿಲ್ ಚಡುಬಾಪ ನೇಮಕಗೊಂಡಿದ್ದಾರೆ.

ಒಟ್ಟು 130 ಕಾರ್ಯಕಾರಿ ಸಮಿತಿ ಸದಸ್ಯರಿರುವ ಈ ಸಂಸ್ಥೆಯ ಚುನಾವಣೆಗೆ ಚುನಾವಣಾಧಿಕಾರಿಯಾಗಿ ಇಸ್ಮಾಯಿಲ್ ಜುಬಾಪು ಕಾರ್ಯನಿರ್ವಹಿಸಿದ್ದರು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News