ಕಾಂಗ್ರೆಸ್ ಮುಖಂಡ ರಮೇಶ್ ಎನ್. ಕೋಟ್ಯಾನ್ ನಿಧನ
Update: 2018-02-01 19:48 IST
ಉಡುಪಿ, ಫೆ.1: ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಎನ್. ಕೋಟ್ಯಾನ್ ಅವರು ಬುಧವಾರ ಸಂಜೆ ಇಂದಿರಾನಗರ ಕುಕ್ಕಿಕಟ್ಟೆಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಕಾಂಗ್ರೆಸ್ ಪಕ್ಷದ ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ದುಡಿದ ರಮೇಶ್ ಕೋಟ್ಯಾನ್, ನಗರದ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಸಂಘಟನೆಯ ಸ್ಥಾಪಕರಲ್ಲಿ ಒಬ್ಬರಾಗಿದ್ದರು. ಅಲ್ಲದೆ ಉಡುಪಿ ನಗರಸಭೆಯ ನಾಮನಿರ್ದೇಶಿತ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸಿದ್ದರು.
ರಮೇಶ್ ಅವರ ನಿಧನಕ್ಕೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ವಿನಯಕುಮಾರ್ ಸೊರಕೆ, ಕೆ. ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಪ್ರಧಾನ ಕಾರ್ಯದಶಿಗಳಾದ ಬಿ.ನರಸಿಂಹ ಮೂರ್ತಿ, ರಥಬೀದಿ ಗೆಳೆಯರು ಸಂಘಟನೆ ಅಧ್ಯಕ್ಷ ಪ್ರೊ. ಮುರಳಿಧರ ಉಪಾಧ್ಯ ಹಿರಿಯಡ್ಕ ಸಂತಾಪ ಸೂಚಿಸಿದ್ದಾರೆ.