×
Ad

ನಾಗರಿಕ ಸೇವೆಯಿಂದ ದೂರವುಳಿದಿರುವ 56 ವಿಮಾನ ನಿಲ್ದಾಣಗಳಿಗೆ ‘ಉಡಾನ್’ ವಿಸ್ತರಣೆ

Update: 2018-02-01 22:14 IST

ಹೊಸದಿಲ್ಲಿ,ಫೆ.1: ನಾಗರಿಕ ಸೇವೆಯಲ್ಲಿಲ್ಲದ 56 ವಿಮಾನ ನಿಲ್ದಾಣಗಳು ಮತ್ತು 31 ಹೆಲಿಪ್ಯಾಡ್‌ಗಳಿಗೆ ಸರಕಾರದ ಪ್ರಾದೇಶಿಕ ವಾಯುಸಂಪರ್ಕ ಯೋಜನೆ ‘ಉಡಾನ್’ನಡಿ ಸಂಪರ್ಕ ಕಲ್ಪಿಸಲಾಗುವುದು ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಗುರುವಾರ ತನ್ನ ಬಜೆಟ್ ಭಾಷಣದಲ್ಲಿ ಪ್ರಕಟಿಸಿದರು.

ನೂತನ ಉಪಕ್ರಮವೊಂದರಡಿ ವಾರ್ಷಿಕ ಒಂದು ಶತಕೋಟಿ ಯಾನಗಳನ್ನು ನಿರ್ವಹಿಸಲು ವಿಮಾನ ನಿಲ್ದಾಣಗಳ ಸಾಮರ್ಥ್ಯವನ್ನು ಐದು ಪಟ್ಟಿಗೂ ಅಧಿಕ ವಿಸ್ತರಿಸಲು ಸರಕಾರವು ಉದ್ದೇಶಿಸಿದೆ ಎಂದು ತಿಳಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ದೇಶಿಯ ಪ್ರಯಾಣಿಕರ ಸಂಖ್ಯೆ ವಾರ್ಷಿಕ ಶೇ.18ರ ದರದಲ್ಲಿ ಬೆಳವಣಿಗೆಯನ್ನು ಕಂಡಿದೆ ಮತ್ತು ನಮ್ಮ ವಿಮಾನಯಾನ ಸಂಸ್ಥೆಗಳು 900ಕ್ಕೂ ಅಧಿಕ ಹೊಸ ವಿಮಾನಗಳಿಗೆ ಬೇಡಿಕೆಗಳನ್ನು ಸಲ್ಲಿಸಿವೆ ಎಂದರು.

 ಉಡಾನ್ ಯೋಜನೆಯಡಿ ಈಗಾಗಲೇ ನಾಗರಿಕ ಸೇವೆಯಲಿಲ್ಲದ 16 ವಿಮಾನ ನಿಲ್ದಾಣಗಳಿಂದ ಕಾರ್ಯಾಚರಣೆಗಳು ಆರಂಭಗೊಂಡಿವೆ ಎಂದ ಅವರು, ಸರಕಾರದ ಈ ಉಪಕ್ರಮದಿಂದಾಗಿ ಹವಾಯಿ ಚಪ್ಪಲಿಗಳನ್ನು ಧರಿಸುವವರೂ ವಿಮಾನಗಳಲ್ಲಿ ಪ್ರಯಾಣಿಸುವಂತಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News