ರೊಹಿಂಗ್ಯಾ ಬಿಕ್ಕಟ್ಟಿಗೆ ನರಹತ್ಯೆಯ ಮುದ್ರೆಯಿದೆ: ಸಂಯುಕ್ತ ರಾಷ್ಟ್ರ ಅಧಿಕಾರಿ

Update: 2018-02-01 17:27 GMT

ಸಿಯೋಲ್ (ದ.ಕೊರಿಯಾ), ಫೆ.1: ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆದ ಸೇನಾ ಹಿಂಸಾಚಾರವು ನರಹತ್ಯೆ ಮುದ್ರೆಯನ್ನು ಹೊಂದಿದೆ ಎಂದು ಮ್ಯಾನ್ಮಾರ್‌ನಲ್ಲಿರುವ ಸಂಯುಕ್ತ ರಾಷ್ಟ್ರದ ಮಾನವ ಹಕ್ಕು ವಿಭಾಗದ ವಿಶೇಷ ರಾಯಭಾರಿ ತಿಳಿಸಿದ್ದಾರೆ.

ಈ ಕುರಿತು ಗುರುವಾರದಂದು ಸಿಯೋಲ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಾಂಗಿ ಲೀ, ಪ್ರಮಾಣೀಕೃತ ಅಂತಾರಾಷ್ಟ್ರೀಯ ಪೀಠ ಅಥವಾ ನ್ಯಾಯಾಲಯ ಈ ಬಗ್ಗೆ ಇರುವ ಸಾಕ್ಷಿಗಳನ್ನು ಒಪ್ಪುವವರೆಗೆ ನರಹತ್ಯೆಯ ಬಗ್ಗೆ ನಿಶ್ಚಿತ ಘೋಷಣೆಯನ್ನು ಮಾಡಲು ಸಾಧ್ಯವಾಗದಿದ್ದರೂ ಅದಕ್ಕೆ ಪೂರಕವಾದ ಕುರುಹುಗಳನ್ನು ನಾವು ನೋಡಬಹುದಾಗಿದೆ ಎಂದು ಹೇಳಿದ್ದಾರೆ.

ಮ್ಯಾನ್ಮಾರ್‌ನಲ್ಲಿ ನಡೆದಿರುವ ಹತ್ಯಾಕಾಂಡ ಮತ್ತು ಅಲ್ಲಿನ ಗು ಡರ್ ಪಿನ್ ಎಂಬ ಗ್ರಾಮದಲ್ಲಿ ಸಿಕ್ಕಿರುವ ಐದು ಸಾಮೂಹಿಕ ಸಮಾಧಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಲೀ, ಆ ಗ್ರಾಮದ ಬಗ್ಗೆ ನನಗೆ ನಿಖರವಾದ ಮಾಹಿತಿಯೇನೂ ತಿಳಿದಿಲ್ಲ. ಆದರೆ ರೊಹಿಂಗ್ಯಾ ಹತ್ಯಾಕಾಂಡದಲ್ಲಿ ಉಂಟಾಗಿರುವ ವಿನ್ಯಾಸವನ್ನು ನೀವು ಗಮನಿಸಬಹುದು ಎಂದು ಹೇಳಿಕೊಂಡಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಿಂದ ಸುಮಾರು 70,000 ರೊಹಿಂಗ್ಯಾಗಳು ತಮ್ಮ ಹಳ್ಳಿಗಳನ್ನು ತೊರೆದು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News