ಪೋಲ್ಯಾಂಡ್ ಸೆನೆಟ್‌ನಿಂದ ವಿವಾದಿತ ಹತ್ಯಾಕಾಂಡ ಮಸೂದೆಗೆ ಅಂಗೀಕಾರ

Update: 2018-02-01 17:55 GMT

ವೂಸೊ (ಪೋಲ್ಯಾಂಡ್), ಫೆ.1: ಪೋಲ್ಯಾಂಡ್ ಪ್ರಜೆಗಳು ನಾಝಿ ಹತ್ಯಾಕಾಂಡದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸುವುದನ್ನು ನಿಷೇಧಿಸುವ ವಿವಾದಿತ ಹತ್ಯಾಕಾಂಡ ಕಾಯ್ದೆಯನ್ನು (ಹೋಲೊಕಾಸ್ಟ್ ಬಿಲ್) ಪೋಲ್ಯಾಂಡ್ ಸೆನೆಟ್ ಅಂಗೀಕರಿಸಿದೆ.

ಪೋಲ್ಯಾಂಡ್‌ನಲ್ಲಿರುವ ನಾಝಿಗಳ ಹತ್ಯಾ ಶಿಬಿರಗಳನ್ನು ಪೋಲಿಶ್ (ಪೋಲ್ಯಾಂಡ್‌ಗೆ ಸೇರಿದ್ದು) ಎಂದು ಆರೋಪಿಸುವುದನ್ನೂ ಈ ಕಾಯ್ದೆ ನಿಷೇಧಿಸುತ್ತದೆ. ತಪ್ಪಿತಸ್ಥರಿಗೆ ಮೂರು ವರ್ಷ ಜೈಲು ಅಥವಾ ದಂಡ ರೂಪದ ಶಿಕ್ಷೆಯನ್ನೂ ಕಾಯ್ದೆಯಲ್ಲಿ ನಿಗದಿಪಡಿಸಲಾಗಿದೆ.

ದೇಶೀಯ ಹತ್ಯಾಕಾಂಡ ನಿರಾಕರಣೆ ಕಾನೂನನ್ನು ಬಲಪಡಿಸಲು ಮುಂದಾಗಿರುವ ಇಸ್ರೇಲ್, ಪೋಲ್ಯಾಂಡ್‌ನ ಈ ನಡೆಗೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಈ ಕಾಯ್ದೆಯನ್ನು ಕಾನೂನಿನಲ್ಲಿ ಅಳವಡಿಸುವುದಕ್ಕೂ ಮುನ್ನ ಅದಕ್ಕೆ ಅಧ್ಯಕ್ಷರ ಅಂಕಿತದ ಅಗತ್ಯವಿದೆ.

ನಮ್ಮ ಐತಿಹಾಸಿಕ ಸತ್ಯವನ್ನು ಕಾಪಾಡುವ ಹಕ್ಕು ನಮಗಿದೆ ಎಂದು ಪೋಲಿಶ್ ಅಧ್ಯಕ್ಷ ಅಂದ್ರೇಝ್ ಜುಡಾ ತಿಳಿಸಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇದು ಇತಿಹಾಸವನ್ನು ಪುನರ್‌ಬರೆಯುವ ಮತ್ತು ಹತ್ಯಾಕಾಂಡವನ್ನು ನಿರಾಕರಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ. ಮಸೂದೆಯ ಬಗ್ಗೆ ಇಸ್ರೇಲ್ ಜೊತೆ ಮಾತುಕತೆ ನಡೆಸುವುದಾಗಿ ಪೋಲ್ಯಾಂಡ್ ಅಧ್ಯಕ್ಷರು ಭರವಸೆ ನೀಡಿದ ಕೆಲವೇ ದಿನಗಳಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿರುವುದು ಇಸ್ರೇಲ್ ಕೋಪವನ್ನು ಇಮ್ಮಡಿಗೊಳಿಸಿದೆ.

ಈ ಕಾಯ್ದೆಯ ಬಗ್ಗೆ ಮರುಚಿಂತಿಸುವಂತೆ ಅಮೆರಿಕಾ ಕೂಡಾ ಪೊಲೀಶ್ ಸರಕಾರಕ್ಕೆ ಮನವಿ ಮಾಡಿದೆ. ಈ ಮಸೂದೆಯ ಜಾರಿಯಿಂದ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುಂದುಂಟಾಗುವ ಮತ್ತು ರಾಜನೈತಿಕ ಬಿರುಕು ಮೂಡುವ ಸಾಧ್ಯತೆಯಿದೆ ಎಂದು ಅಮೆರಿಕಾ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News