ರಾಜಸ್ತಾನದಿಂದ ಬಿಜೆಪಿಗೆ ತ್ರಿವಳಿ ತಲಾಕ್: ಶತ್ರುಘ್ನ ಸಿನ್ಹಾ

Update: 2018-02-03 14:15 GMT

ಹೊಸದಿಲ್ಲಿ, ಫೆ. 3: ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿರುವ ಬಗ್ಗೆ ಪಕ್ಷದ ಸಂಸದ ಶತ್ರುಘ್ನ ಸಿನ್ಹಾ ಶುಕ್ರವಾರ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸೋತಿರುವ ವಸಂಧುರಾ ರಾಜೇ ನೇತೃತ್ವದ ಬಿಜೆಪಿ ಸರಕಾರ ಅವಮಾನ ಎದುರಿಸುತ್ತಿದೆ ಎಂದು ಅವರು ಹೇಳಿದರು. ರಾಜಸ್ಥಾನ ಉಪಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಬಗ್ಗೆ ಅಣಕವಾಡಿರುವ ಅವರು, ಬಿಜೆಪಿಗೆ ತ್ರಿವಳಿ ತಲಾಕ್ ನೀಡಿದ ಮೊದಲ ರಾಜ್ಯವಾಗಲಿದೆ ಎಂದರು. ಬಿಜೆಪಿಗೆ ತ್ರಿವಳಿ ತಲಾಕ್ ನೀಡಿದ ಮೊದಲ ರಾಜ್ಯ ರಾಜಸ್ಥಾನ. ಅಜ್ಮೀರ್ ತಲಾಖ್, ಅಲ್ವಾರ್ ತಲಾಖ್, ಮಂದಲ್‌ಗಢ ತಲಾಖ್. ಚುನಾವಣೆಯಲ್ಲಿ ನಮ್ಮ ವಿರೋಧಿಗಳು ದಾಖಲೆ ಅಂತರದಿಂದ ಜಯಗಳಿಸಿದ್ದಾರೆ ಎಂದು ಶತ್ರುಘ್ನ ಸಿನ್ಹಾ ಟ್ವೀಟ್‌ನಲ್ಲಿ ಹೇಳಿದ್ದಾರೆ.

 “ಈ ಹಾನಿಕರ ಫಲಿತಾಂಶ ಮುಂದೆ ಟಾಟಾ ಬಾಯ್ ಬಾಯ್ ಫಲಿತಾಂಶವಾಗಿ ಬದಲಾಗುವ ಸಾಧ್ಯತೆ ಇದೆ. ಎದ್ದೇಳು ಬಿಜೆಪಿ. ಜೈಹಿಂದ್” ಎಂದು ಅವರು ಹೇಳಿದ್ದಾರೆ. ಶತ್ರುಘ್ನ ಸಿನ್ಹಾ ಕಳೆದ ಒಂದು ವರ್ಷಗಳಿಂದ ವಿಭಿನ್ನ ನಿಲುವು ತೆಗೆದುಕೊಳ್ಳುತ್ತಿ ರುವುದರಿಂದ ಬಿಜೆಪಿ ಅತೀವ ಅವಮಾನ ಎದುರಿಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News