×
Ad

ಭಟ್ಕಳ: ವಾಹನ ತಡೆದು, ಹಲ್ಲೆಗೈದು ನಗದು ದೋಚಿದ ತಂಡ; ದೂರು

Update: 2018-02-03 19:46 IST

ಭಟ್ಕಳ, ಫೆ. 3: ವಾಹನವೊಂದನ್ನು ತಡೆದು ಇಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಅವರಲ್ಲಿದ್ದ ನಗದು ಹಾಗೂ ಮೊಬೈಲ್ ದೋಚಿ ಪರಾರಿಯಾದ ಘಟನೆ ಶನಿವಾರ ರಾ.ಹೆ.63ರ ಐಸ್ ಫ್ಯಾಕ್ಟರಿ ಬಳಿ ನಡೆದಿದೆ.

ಹಲ್ಲೆಗೊಳಗಾದವರನ್ನು ಕುಂದಾಪುರ ತಲ್ಲೂರು ನಿವಾಸಿಗಳಾದ ಕಷ್ಣ ಪುಜಾರಿ ಹಾಗೂ ಗುರುರಾಜ ಶೆಟ್ಟಿ ಎಂದು ಗುರುತಿಸಲಾಗಿದೆ. 

ಉಪ್ಪಿನಕಾಯಿ ವಿತರಕರಾಗಿರುವ ಅವರು ಮುರುಡೇಶ್ವರದಲ್ಲಿ ಉಪ್ಪಿನಕಾಯಿ ವಿತರಿಸಿ ಕುಂದಾಪುರಕ್ಕೆ ತಮ್ಮ ವಾಹನದಲ್ಲಿ ಮರಳುತ್ತಿದ್ದಾಗ ಹಿಂಬದಿಯಿಂದ ಎರಡು ಬೈಕ್ ನಲ್ಲಿ ಬಂದ ತಂಡ ಏಕಾಎಕಿ ತಮ್ಮ ವಾಹನಕ್ಕೆ ಹಿಂಬದಿಯಿಂದ ಕಲ್ಲು ಎಸೆದು ಕಾರಿನ ಗಾಜು ಒಡೆದು, ನಮಗೆ ಹಲ್ಲೆಗೈದು, ನಾಲ್ಕು ಸಾವಿರ ರೂ. ಹಾಗೂ ಮೊಬೈಲ್ ದೋಚಿ ಪರಾರಿಯಾದರು ಎಂದು ಹಲ್ಲೆಗೊಳಗಾದ ಕೃಷ್ಟ ಪುಜಾರಿ ದೂರಿದ್ದಾರೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News