×
Ad

ಟಿಕೆಟ್ ನೀಡಿಲ್ಲವೆಂದು ಪಕ್ಷ ತೊರೆದ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ

Update: 2018-02-03 20:15 IST

ಅಗರ್ತಲಾ,ಫೆ.3: ಫೆ.18ರಂದು ನಡೆಯಲಿರುವ ತ್ರಿಪುರಾ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಲ್ಪಟ್ಟಿರುವ ರಾಜ್ಯ ಬಿಜೆಪಿ ಘಟಕದ ಮಾಜಿ ರಾಜ್ಯಾಧ್ಯಕ್ಷ ರಣಜಯ ಕುಮಾರ ದೇಬ್ ಅವರು ಪಕ್ಷಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

2001ರಿಂದ ಐದು ವರ್ಷಗಳ ಕಾಲ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದ ದೇಬ್ ಉತ್ತರ ತ್ರಿಪುರಾದ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದರು.

ಅವರ ರಾಜೀನಾಮೆಯನ್ನು ದುರದೃಷ್ಟಕರ ಮತ್ತು ಅನಿರೀಕ್ಷಿತ ಎಂದು ಬಣ್ಣಿಸಿರುವ ಬಿಜೆಪಿ ವಕ್ತಾರ ಮೃಣಾಲ ಕಾಂತಿ ದೇಬ್ ಅವರು, ರಣಂಜಯ್ 80ರ ದಶಕದಲ್ಲಿಯೇ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅದಕ್ಕಾಗಿ ಬಹಳಷ್ಟು ದುಡಿದಿದ್ದರು. ಪಕ್ಷದ ಟಿಕೆಟ್ ಸಿಕ್ಕಿಲ್ಲವೆಂಬ ಕಾರಣದಿಂದ ಅವರು ರಾಜೀನಾಮೆ ನೀಡಬಾರದು ಎಂದಿದ್ದಾರೆ.

60 ಸದಸ್ಯಬಲದ ರಾಜ್ಯ ವಿಧಾನಸಭೆಯ 51 ಸ್ಥಾನಗಳಿಗೆ ಸ್ಪರ್ಧಿಸಿರುವ ಬಿಜೆಪಿಯು ಒಂಭತ್ತು ಕ್ಷೇತ್ರಗಳನ್ನು ತನ್ನ ಮಿತ್ರಪಕ್ಷ ಐಪಿಎಫ್‌ಟಿಗೆ ಬಿಟ್ಟುಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News