ಸಾಲಿಗ್ರಾಮ: ಪ್ಲಾಸ್ಟಿಕ್‌ಗೆ ನಿಷೇಧ, ಬಳಸಿದರೆ ದಂಡ
Update: 2018-02-03 20:25 IST
ಉಡುಪಿ, ಫೆ.3: ಕರ್ನಾಟಕ ರಾಜ್ಯ ಸರಕಾರ ಅಧಿಸೂಚನೆಯ ಮೂಲಕ ಎಲ್ಲಾ ರೀತಿಯ ಫ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಈಗಾಗಲೇ ನಿಷೇಧಿಸಿದೆ. ಈ ಕುರಿತು ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಸಾರ್ವಜನಿಕರಿಗೆ ಹಾಗೂ ಮಾರುವ ವರ್ತಕರಿಗೆ ಹಲವು ಬಾರಿ ತಿಳುವಳಿಕೆ ನೀಡಿದ್ದರೂ, ನಿಷೇಧಿತ ವಸ್ತುಗಳನ್ನು ಬಳಕೆ ಮತ್ತು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಆದುದರಿಂದ ಇನ್ನು ಮುಂದೆ ಸರಕಾರದ ಅಧಿಸೂಚನೆಯನ್ನು ಉಲ್ಲಂಘಿಸಿ ನಿಷೇಧಿತ ವಸ್ತುಗಳನ್ನು ಬಳಸುವವರು, ಮಾರಾಟ ಮಾಡುವವರಿಗೆ ದಂಡ ವಿಧಿಸಿ, ಸಂಬಂಧ ಪಟ್ಟ ನ್ಯಾಯಾಲಯದಲ್ಲಿ ಪರಿಸರ ಸಂರಕ್ಷಣೆ ಕಾಯಿದೆ ಅನ್ವಯ ದೂರುಗಳನ್ನು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಪತ್ರಿಕಾ ಹೇಳಿಕೆಯ ಮೂಲಕ ಎಲ್ಲಾ ಸಾರ್ವಜನಿಕರಿಗೆ, ಅಂಗಡಿ ಮಾಲಕರು, ಮಾರಾಟಗಾರರು, ಸಗಟು ಮಾರಾಟ ಗಾರರು, ಚಿಲ್ಲರೆ ವ್ಯಾಪಾರಿಗಳಿಗೆ ಎಚ್ಚರಿಸಿದೆ.