ಉಡುಪಿ: ಮಗುವಿನ ತಾಯಿ ಪತ್ತೆಗೆ ಮನವಿ
Update: 2018-02-03 20:26 IST
ಉಡುಪಿ, ಫೆ.3: ಕಳೆದ ವರ್ಷದ ಜೂನ್ 26ರಂದು ಉಡುಪಿ ಬಸ್ ನಿಲ್ದಾಣದಲ್ಲಿ 7 ತಿಂಗಳ ಗಂಡು ಮಗು ದೊರೆತ್ತಿದ್ದು, ಈ ಮಗುವಿನ ತಾಯಿ ಹಾವೇರಿ ಜಿಲ್ಲೆಯ ಚಕ್ರ ಗ್ರಾಮದ ರೂಪಾ ಎಂದು ತಿಳಿದುಬಂದಿದೆ.
ಮಗು ಈಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದ್ದು, ತಾಯಿ ರೂಪಾ ಅವರು ಮಗುವಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ 203, ಬಿ ಬ್ಲಾಕ್ ರಜತಾದ್ರಿ ಮಣಿಪಾಲ (ದೂರವಾಣಿ:08202574964), ಅಥವಾ ಮುಖ್ಯಸ್ಥರು ಕೃಷ್ಣಾನುಗೃಹ, ಶ್ರೀಕೃಷ್ಣ ಚಾರಿಟೇಬಲ್ ಟ್ರಸ್ಟ್, ವಸುಂದರಾನಗರ ಮಲ್ಪೆ, ಆಶೀರ್ವಾದ್‌ರೋಡ್ ಸಂತೆಕಟ್ಟೆ ಉಡುಪಿ (0820-2583007) ಇಲ್ಲಿಗೆ ಸಂಪರ್ಕಿಸುವಂತೆ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಕಟಣೆ ತಿಳಿಸಿದೆ.