×
Ad

ಅರ್ಚನ -ಸಮನ್ವಿಗೆ ‘ರಾಗಧನ ಪಲ್ಲವಿ’ ಪ್ರಶಸ್ತಿ ಪ್ರದಾನ

Update: 2018-02-03 21:26 IST

ಉಡುಪಿ, ಫೆ.3: ಉಡುಪಿ ರಾಗಧನ ವತಿಯಿಂದ ಡಾ.ಸುಶೀಲಾ ಉಪಾ ಧ್ಯಾಯ ಸಂಸ್ಮರಣಾರ್ಥ ಡಾ.ಯು.ಪಿ.ಉಪಾಧ್ಯಾಯ ಪ್ರಾಯೋಜಿಸಿರುವ ‘ರಾಗಧನ ಪಲ್ಲವಿ’ ಪ್ರಶಸ್ತಿಯನ್ನು ಜಿಲ್ಲೆಯ ಉದಯೋನ್ಮುಖ ಸಂಗೀತ ಕಲಾವಿದರಾದ ಅರ್ಚನ ಹಾಗೂ ಸಮನ್ವಿ ಅವರಿಗೆ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಮಂಗಳೂರು ವಿವಿಯ ಸಂಸ್ಕೃತ ಪ್ರಾಧ್ಯಾಪಕ ಡಾ.ಕುಮಾರ ಸುಬ್ರಹ್ಮಣ್ಯ ಮಾತನಾಡಿ, ಸಂಗೀತದಲ್ಲಿ ಶ್ರದ್ಧೆ ಇದ್ದರೆ ಮೇಧ ಶಕ್ತಿ ದೊರೆತು ಪ್ರಜ್ಞೆಯ ಮೂಲಕ ವಿದ್ಯೆ ದೊರೆಯಲು ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಬುದ್ಧಿಯ ಪ್ರಕಾರಗಳಾದ ಶ್ರದ್ಧೆ, ಮೇಧ ಹಾಗೂ ಪ್ರಜ್ಞೆಗಳು ಜಾಗೃತಿ ಆಗಬೇಕು ಎಂದು ಅಭಿಪ್ರಾಯ ಪಟ್ಟರು.

ಡಾ.ಯು.ಪಿ.ಉಪಾಧ್ಯಾಯ ಮಾತನಾಡಿದರು. ರಾಗಧನಶ್ರೀಯ ಸಂಪಾ ದಕ ಪ್ರೊ.ಅರವಿಂದ ಹೆಬ್ಬಾರ್, ರಾಗಧನ ಅಧ್ಯಕ್ಷ ಎ.ಈಶ್ವರಯ್ಯ, ಕಾರ್ಯದರ್ಶಿ ಉಮಾಶಂಕರಿ, ವಿದುಷಿ ಸರೋಜಾ ಆಚಾರ್ಯ ಉಪಸ್ಥಿತರಿದ್ದರು. ಕೋಶಾ ಧಿಕಾರಿ ಪ್ರೊ.ಕೆ.ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News