×
Ad

ಕಾರ್ಕಳ ಉಪತಹಶೀಲ್ದಾರ್‌ಗೆ ಬೆದರಿಕೆ

Update: 2018-02-03 21:35 IST

ಕಾರ್ಕಳ, ಫೆ. 3: ಕಡತ ತಿರಸ್ಕರಿಸದಂತೆ ಕಾರ್ಕಳ ಉಪತಹಶೀಲ್ದಾರ್‌ಗೆ ಬೆದರಿಕೆಯೊಡ್ಡಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳದ ಉಮೇಶ್ ಕಲ್ಲೊಟ್ಟೆ ಎಂಬಾತ ಜ. 31ರಂದು ಬೆಳಗ್ಗೆ ಕಾರ್ಕಳ ತಹಶೀಲ್ದಾರರ ಕಚೇರಿಗೆ ಬಂದು ಉಪತಹಶೀಲ್ದಾರ್ ಪಿ.ಗಣೇಶ್ ಅವರಲ್ಲಿ ಹಿರ್ಗಾನಾ ಗ್ರಾಮದ ನಿವಾಸಿಯೋರ್ವರ ಅಕ್ರಮ ಸಕ್ರಮದಡಿಯಲ್ಲಿ ಅನಧಿಕೃತ ಕಟ್ಟಡ ನಿವೇಶನದ ಕಡತವನ್ನು ತಿರಸ್ಕೃತ ಮಾಡಬಾರದು ಎಂದು ತಾಕೀತು ಮಾಡಿದ್ದು, ಬಳಿಕ ಅವರನ್ನು ಏಕವಚನದಲ್ಲಿ ನಿಂದಿಸಿ ಬೆದರಿಕೆಯೊಡ್ಡಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆಗೆ ಮುಂದಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News