ರಿಯಾದ್‌ನಲ್ಲಿ ಎನ್‌ಎಂಎ ವೆಬ್‌ಸೈಟ್ ಉದ್ಘಾಟನೆ
Update: 2018-02-03 21:42 IST
ಕುಂದಾಪುರ, ಫೆ.3: ಕುಂದಾಪುರದ ಕೋಡಿಯಲ್ಲಿ ಮುಖ್ಯ ಆಡಳಿತ ಕಚೇರಿ ಯನ್ನು ಹೊಂದಿರುವ ಸಾಮಾಜಿಕ ಸೇವಾ ಸಂಸ್ಥೆ ನಸ್ರತುಲ್ ಮುಸಾಕೀನ್ ಅಸೋಸಿಯೇಶನ್(ಎನ್‌ಎಂಎ) ಇದರ ವೆಬ್‌ಸೈಟ್‌ನ ಉದ್ಘಾಟನೆ ಇತ್ತೀಚೆಗೆ ಸೌದಿ ಅರೇಬಿಯಾದ ರಿಯಾದ್ ಘಟಕದ ವತಿಯಿಂದ ರಿಯಾದ್‌ನ ಮಲಾಝ್ ನಲ್ಲಿರುವ ಅಲ್‌ಮಾಸ್ ಹೊಟೇಲಿನ ಸಭಾಂಗಣದಲ್ಲಿ ಜರಗಿತು.
ವೆಬ್‌ಸೈಟ್‌ನ್ನು ಸೆಂಟ್ರಲ್ ಕಮೀಟಿ ಅಧ್ಯಕ್ಷ ತಾಹೀರ್ ಹಸನ್ ಉದ್ಘಾಟಿಸಿ ದರು. ಅಧ್ಯಕ್ಷತೆಯನ್ನು ರಿಯಾದ್ ಘಟಕದ ಅಧ್ಯಕ್ಷ ಅಸ್ಲಮ್ ಕೋಯಾ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ಇದ್ರೀಸ್ ಖುರೈಶಿ, ಅಬ್ದುಲ್ ಖಾದರ್ ಕುದ್ರೋಳಿ, ರಿಯಾದ್‌ನ ವೈದ್ಯ ಡಾ.ತಾಹಿರುಲ್ಲಾ ಸಿದ್ಧಿಖಿ, ಅಹ್ಮದ್ ಮೂಸಾ ಅಲಿ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಅನ್ವರ್ ಅಲಿ ಹುಸೇನ್ ವರದಿ ವಾಚಿಸಿದರು. ಜತೆ ಕಾರ್ಯದರ್ಶಿ ಅಬು ಮಹ್ಮದ್ ವಂದಿಸಿದರು.