ಜುಗಾರಿ: 11 ಮಂದಿಯ ಬಂಧನ
ಕಾರ್ಕಳ, ಫೆ.3: ಹವಾಲ್ದಾರ್‌ಬೆಟ್ಟು ಎಂಬಲ್ಲಿ ಫೆ. 2ರಂದು ರಾತ್ರಿ ವೇಳೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಸ್ಥಳೀಯರಾದ ಸುಂದರ್(53), ಸುಧಾಕರ್ (32), ಕಿರಣ್(23), ಮಂಜುನಾಥ(52), ಉದಯ(30), ಸದಾನಂದ (38) ಎಂಬವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿ, 1370ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಮಟ್ಕಾ ಜುಗಾರಿ ಆಟಕ್ಕೆ ಸಂಬಂಧಿಸಿ ಫೆ.2ರಂದು ಕುಂದಾ ಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ರೂರು ಗ್ರಾಮದ ಮೂಡಕೇರಿ ಜಂಕ್ಷನ್ ಬಳಿ ಬಸ್ರೂರು ಸಂತೆಕಟ್ಟೆಯ ರವಿ(31), ವಂಡ್ಸೆಯ ದೇವರಾಜ(29), ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರ ಹೋಬಳಿ ಗ್ರಾಮದ ವಿನಯ ನರ್ಸಿಂಗ್ ಆಸ್ಪತ್ರೆ ಬಳಿ ಮಠದಬೆಟ್ಟುವಿನ ಶೇಖರ ದೇವಾಡಿಗ(50), ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪುಂದ ಗ್ರಾಮದ ಅಂಬಾಗಿಲು ಜಂಕ್ಷನ್ ಬಳಿ ಅಂಬಾಗಿಲಿನ ರಾಘವೇಂದ್ರ ಗಾಣಿಗ(35), ಫೆ.3ರಂದು ಕುಂದಾಪುರ ಕುಂಭಾಶಿ ಗ್ರಾಮದ ಗಾಯತ್ರಿ ಮಿನಿ ಹಾಲ್ ಬಳಿ ಬೇಳೂರಿನ ಬಸವ ಮರಕಾಲ(48) ಎಂಬವರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.