ಇಬ್ಬರು ಶಂಕಿತ ಭಯೋತ್ಪಾದಕರ ಬಂಧನ

Update: 2018-02-03 16:16 GMT

ಶ್ರೀಗನರ, ಫೆ. 3: ಪಾಕಿಸ್ತಾನದ ಮಾನ್ಯತೆ ಇರುವ ವಿಸಾದಿಂದ ಗಡಿ ದಾಟಿ ಇಸ್ಲಾಮಾಬಾದ್‌ನಲ್ಲಿ ಲಷ್ಕರ್ ಎ ತೊಯ್ಬಾ ಶಸ್ತ್ರಾಸ್ತ್ರ ತರಬೇತಿ ಪಡೆದ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ವಾಯಿದ್ ಹೇಳಿದ್ದಾರೆ. ತರಬೇತಿ ನೀಡುವವರು ವಿಸಾ ನೀಡುವವರ ನಡುವೆ ಮೈತ್ರಿ ಇರುತ್ತದೆ. ಎಂದು ವಾಯಿದ್ ಪಾಕಿಸ್ತಾನದ ಹೈಕಮಿಷನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭಯೋತ್ಪಾದಕ ಗುಂಪಿಗೆ ಸೇರುವ ಮೊದಲು ಪೊಲೀಸ್, ಸೇನೆ ಹಾಗೂ ಕೇಂದ್ರ ಪಡೆ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದೆ. ಇವರನ್ನು ಅಬ್ದುಲ್ ಮಜೀದ್ ಹಾಗೂ ಮುಹಮ್ಮದ್ ಅಶ್ರಫ್ ಮಿರ್ ಎಂದು ಗುರುತಿಸಲಾಗಿದೆ. ಅವರು ಉತ್ತರ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಕೀರಿ ಹಾಗೂ ಪಟ್ಟಾನ್‌ನವರು ಎಂದು ಅವರು ತಿಳಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿರುವ ಕ್ಯಾಂಪ್‌ನಲ್ಲಿ ನಮಗೆ ತರಬೇತಿ ನೀಡಲಾಗಿತ್ತು. ತರಬೇತಿ ಶಿಬಿರದಲ್ಲಿ ಅತ್ಯಧಿಕ ಜನರು ಪಾಲ್ಗೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಪಾಕಿಸ್ತಾನದವರು ಎಂದು ಅವರಿಬ್ಬರು ಮಾಹಿತಿ ನೀಡಿರುವುದಾಗಿ ವಾಯಿದ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News