ಸೈಯದ್ ಬದ್ರುದ್ದೀನ್ ತಂಙಳ್ ಪಾವೂರು ನಿಧನ
ಮಂಜೇಶ್ವರ, ಫೆ. 3: ಸೈಯದ್ ಬದ್ರುದ್ದೀನ್ ತಂಙಳ್ ಪಾವೂರು ಶನಿವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.
ಅಸೌಖ್ಯದಿಂದ ಕೂಡಿದ್ದ ಇವರನ್ನು ಚಿಕಿತ್ಸೆಗಾಗಿ ಮಲಪ್ಪುರಂ ಸಮೀಪದ ಪೆರಿಂದಲ್ಮಣ್ಣ ಎಂಬಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಮಲಪ್ಪುರಂ ಪೆರಿಂದಲ್ಮಣ್ಣದ ಆಸ್ಪತ್ರೆಯಿಂದ ಮಂಜೇಶ್ವರ ಪಾವೂರಿನ ಮನೆಗೆ ಕರೆ ತರುತ್ತಿದ್ದ ವೇಳೆ ಕಣ್ಣೂರು ಹಾದಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಮೃತದೇಹದ ದಫನ ಕಾರ್ಯ ರವಿವಾರ ಬೆಳಗ್ಗೆ ಬಾಚಲಿಕೆಯ ಜಬಲುನ್ನೂರು ಮಸೀದಿ ವಠಾರದಲ್ಲಿ ನಡೆಯಲಿದೆ.
ಸೈಯದ್ ಬದ್ರುದ್ದೀನ್ ತಂಙಳ್ ಅಲ್ ಮಶ್‍ಹೂರು ಎಂದೇ ಖ್ಯಾತರಾಗಿದ್ದ ಅವರು ಧಾರ್ಮಿಕ , ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದರು. ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿ ಉಪಾಧ್ಯಕ್ಷರಾಗಿಯೂ , ಪಾವೂರು ರಹ್ಮಾನಿಯ್ಯಾ ಜುಮಾ ಮಸೀದಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.