×
Ad

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆುಯ ಲಾಂಛನ ಬಿಡುಗಡೆ

Update: 2018-02-03 22:01 IST

ಮಂಗಳೂರು, ಫೆ.3: ಗಡಿನಾಡ ಸಾತ್ಯ ಸಾಂಸ್ಕೃತಿಕ ಅಕಾಡೆುಯ ಲಾಂಛನವನ್ನು ಕರ್ನಾಟಕ ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು ಕೇರಳದ ಭಾಗವಾಗಿದ್ದುಕೊಂಡು ಕಾಸರಗೋಡು ಭಾಷಾ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತಿರುವುದು ಪ್ರಶಂಸನೀಯ. ಕನ್ನಡದ ಏಳಿಗೆಗಾಗಿ ಯುವಜನರು ಒಂದಾಗಿ ಮುನ್ನಡೆಯುತ್ತಿರುವುದು ಗಮನೀಯ ಅಂಶ. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯು ಕನ್ನಡದ ಚೆಲುವನ್ನು ಸಾರುವ ಅಕ್ಷರಮಾಲೆಯನ್ನು ಅಳವಡಿಸಿ ತಯಾರಿಸಿದ ಲಾಂಛನ ಭಾಷಾ ಪ್ರೇಮವನ್ನು ಸಾರುತ್ತಿದೆ. ಗಡಿಭಾಗದ ಜನರು ಭಾಷೆ ಹಾಗೂ ಇತರ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಕಾಸರಗೋಡಿನ ಕನ್ನಡಿಗರು ಈ ಸಮಸ್ಯೆಗಳನ್ನು ಬದಿಗಿಟ್ಟು ತಮ್ಮ ಹಾದಿಯಲ್ಲಿ ಕನ್ನಡದ ಕಂಪನ್ನು ಪಸರಿಸಿ ಅದನ್ನು ಮುಂದಿನ ಜನಾಂಗಕ್ಕೂ ಹಂಚುವ ಕೆಲಸವನ್ನು ಅಕಾಡಮಿಯು ಮಾಡುತ್ತಿರುವುದು ಅಭಿನಂದನೀಯ ಎಂದು ಸಂತಸ ವ್ಯಕ್ತಪಡಿಸಿದರು.

ದ.ಕ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿ, ಸಾಹಿತಿ ಶಾಂತಪ್ಪ ಬಾಬು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಪ್ರಭಾಕರ ಕಲ್ಲೂರಾಯ ಬೆಳ್ಳೂರು, ಅಕಾಡಮಿಯ ಉಪಾಧ್ಯಕ್ಷ ಪ್ರೊ.ಶ್ರೀನಾಥ್, ಝೆಡ್.ಎ.ಕಯ್ಯೊರು, ಕರ್ನಾಟಕ ಜಾನಪದ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಶ್ರೀಕಾಂತ್ ನೆಟ್ಟಣಿಗೆ, ವಸಂತ ಭಾರಡ್ಕ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News